ಕೊಕ್ಕಡ : ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಕೊಕ್ಕಡ ಘಟಕ ಇದರ 2024-25 ನೇ ಸಾಲಿನ ಪದಗ್ರಹಣ ಸಮಾರಂಭವು ಹಾಗೂ ವಾರ್ಷಿಕ ಸಮ್ಮಿಲನ ಕಾರ್ಯಕ್ರಮವು ಕೊಕ್ಕಡ- ಕೌಕ್ರಾಡಿ ಸಂತ ಜೋನರ ದೇವಾಲಯದ ಸಭಾಭವನದಲ್ಲಿ ನಡೆಯಿತು.
ಪುತ್ತೂರು ವಲಯ ಅಧ್ಯಕ್ಷೆ ಲವೀನಾ ಪಿಂಟೊ ಅವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ನೂತನ ಅಧ್ಯಕ್ಷೆಯಾಗಿ ಸರಿತಾ ಸ್ಟ್ರೆಲ್ಲಾ, ಕಾರ್ಯದರ್ಶಿಯಾಗಿ ಮೆಲ್ವಿನ್ ಡಿಸೋಜ, ಖಜಾಂಜಿಯಾಗಿ ವಿಕ್ಟರ್ ಸುವಾರಿಸ್ ಆಯ್ಕೆಯಾದರು.
ಘಟಕದ ಆತ್ಮೀಕ ನಿರ್ದೇಶಕ ಫಾ. ಜಗದೀಶ್ ಲೂಯಿಸ್ ಪಿಂಟೋ, ಫಾ.ಅಶೋಕ್ ಡಿ’ಸೋಜ, ವಲಯ ಪದಾಧಿಕಾರಿಗಳಾದ ಲ್ಯಾನ್ಸಿ ಮಸ್ಕರೇನ್ಹಸ್, ರೋಶನ್ ಡಾಯಸ್ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಸಿಲ್ವೆಸ್ಟರ್ ಡಿ’ಸೋಜ ವಾರ್ಷಿಕ ವರದಿ ವಾಚಿಸಿದರು.