24.4 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಧರ್ಮಸ್ಥಳ ಯಕ್ಷಗಾನ ಮೇಳದ ಕಲಾವಿದ ಗಂಗಾಧರ ಪುತ್ತೂರು ವೇಷ ಕಳಚುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ನಿಧನ

ಬೆಳ್ತಂಗಡಿ: ವೇಷ ಕಳಚುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು(60ವ) ಅವರು ಮೇ 1 ರಂದು ನಿಧನರಾಗಿದ್ದಾರೆ.

ಬುಧವಾರ ರಾತ್ರಿ ಕುಂದಾಪುರ ಸಮೀಪದ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು ಇನ್ನೇನು ಮುಖದ ಬಣ್ಣವನ್ನು ತೆಗೆಯುತ್ತಿರುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಇವರು ಧರ್ಮಸ್ಥಳ ಮೇಳದಲ್ಲಿ  ಸುಮಾರು 42 ವರ್ಷಗಳಿಂದ ನಿರಂತರ ಕಲಾವಿದರಾಗಿ  ಸೇವೆ ಸಲ್ಲಿಸಿದ್ದರು.

Related posts

ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ

Suddi Udaya

ಗುರುವಾಯನಕೆರೆ: ಟಿಟಿ ಹಾಗೂ ಟಿಪ್ಪರ್ ಡಿಕ್ಕಿ: ಚಾಲಕ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

Suddi Udaya

ರೆಖ್ಯ: ಕಾಂಗ್ರೆಸ್ ಮುಖಂಡ ಸುನಿಲ್ ಕೋಟಿಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರಕಾರ ಬದ್ಧ

Suddi Udaya

ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಮೃತ್ಯು

Suddi Udaya
error: Content is protected !!