38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

ಕೊಕ್ಕಡ: ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘ ಅರಸಿನಮಕ್ಕಿ ಇದರ ವಾಷಿ೯ಕೋತ್ಸವವು ಮೇ.2ರಂದು ಶ್ರೀಕಾಲಕಾಮ ಪರಶುರಾಮ ದೇವಸ್ಥಾನದ ಚಿತ್ಪಾವನ ಸಭಾ ಭವನ ದರ್ಬೆತಡ್ಕದಲ್ಲಿ ನಡೆಯಿತು.

ಪರಶುರಾಮ ದೇವರಿಗೆ ಪವಮಾನ ಅಭಿಷೇಕ, ಗಣಹೋಮ, ಸಮಾಜದ ವಟುಗಳಿಗೆ ಬ್ರಹ್ಮೋಪದೇಶ ನೀಡುವ ಕಾಯ೯ಕ್ರಮ ಜರಗಿತು.

ಬಳಿಕ ಸಂಘದ ಮಹಾಸಭೆ ಜರಗಿತು, ನೂತನ ಅಧ್ಯಕ್ಷರಾಗಿ ಶ್ರೀವರದ ಶಂಕರ ದಾಮಲೆ, ಕಾರ್ಯದಶಿ೯ಯಾಗಿ ವೆಂಕಟೇಶ ದಾಮಲೆ ಆಯ್ಕೆಯಾದರು.

ಮೇ.3ರಂದು ವೇದ ಕುಸುಮ ಶಿಬಿರವನ್ನು ಗೋಪಾಲ ಮರಾಠೆ ಫೋಕ೯ಳ, ವತ್ಸಲಾ ಅವರು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಶಿಬಿರಾಥಿ೯ಗಳಿಗೆ ಯೋಗೀಶ ದಾಮಲೆಯವರು ಮಾತನಾಡಿ ಹಲವು ವರ್ಷಗಳಿಂದ ನಿರಂತರವಾಗಿ ವೇದ ಕುಸುಮ ಶಿಬಿರವು ಚಿತ್ಪಾವನ ಸಭಾ ಭವನದಲ್ಲಿ ಮೇ ತಿಂಗಳಲ್ಲಿ ನಡೆಯುತ್ತಾ ಬಂದಿದೆ. ಈ ಶಿಬಿರದಲ್ಲಿ ಸಮಾಜದ ಹಲವು ವಟುಗಳು ನಿತ್ಯಾಹ್ನಿಕ, ಸಂಧ್ಯಾವಂದನೆ ಮತ್ತು ಪೂಜಾ ವಿಧಿಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಾಥ೯ಕತೆಯನ್ನು ಪಡೆದಿರುವುದು ಹೆಮ್ಮೆಯ ವಿಷಯ ಹಾಗೂ ಶಿಬಿರವು ಮೇ.12ರ ವರೆಗೆ ನಡೆಯಲಿದೆ ಎಂದರು.

ಶಿಬಿರದಲ್ಲಿ ಸಮಾಜದ ವಟುಗಳಿಗೆ ಸಂಧ್ಯಾವಂದನೆ, ಅಥವ೯ಶೀಷ೯, ಪುರುಷ ಸೂಕ್ತ, ಪುಷ್ಪಾಂಜಲಿಗಳನ್ನು ಹತ್ತು ದಿನಗಳ ಕಾಲದವರೆಗೆ ಗುರುಕುಲ ಮಾದರಿಯಲ್ಲಿ ಕಲಿಸಲಾಗುವುದು. ಗುರುಗಳಾಗಿ ಗೋಪಾಲ ಮರಾಠೆಯವರು ಸೇವೆ ಸಲ್ಲಿಸುತ್ತಾರೆ,

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ವಾಣಿಜ್ಯ ಕಟ್ಟಡ ‘ಉನ್ನತಿ’ ಉದ್ಘಾಟನೆ

Suddi Udaya

ಅಳದಂಗಡಿಯಲ್ಲಿ ಹಿಂದೂ ರುದ್ರಭೂಮಿಗಾಗಿ ಮೀಸಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಬೆಳ್ತಂಗಡಿ ತಾಲ್ಲೂಕಿನ 76 ಕೆರೆಗಳ ಗಡಿ ಗುರುತಿಸಿ ಗ್ರಾಮ ಪಂಚಾಯಿತ್ ಹಾಗೂ ಪಟ್ಟಣ ಪಂಚಾಯತ್ ಹಸ್ತಾಂತರ: ವಿಧಾನ ಪರಿಷತ್ ನಲ್ಲಿ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬನ್ನಿ ದಳದ ಉದ್ಘಾಟನೆ

Suddi Udaya

ಸಂಗೀತ ಜೂನಿಯರ್ ಪರೀಕ್ಷೆ: ಬೆಳ್ತಂಗಡಿ ಎಸ್. ಡಿ. ಎಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಪ್ರಾಪ್ತಿ ವಿ. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

Suddi Udaya

ಬೆಳ್ತಂಗಡಿಯಲ್ಲಿ ನೂರಾ ಗೋಲ್ಡ್ & ಡೈಮಂಡ್ಸ್ ಉದ್ಘಾಟನೆ

Suddi Udaya
error: Content is protected !!