April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ವಸಂತ ಬಂಗೇರ ನಿಧನಕ್ಕೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ

ಬೆಳ್ತಂಗಡಿ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಸುದೀರ್ಘವಾದ ಸೇವೆಯನ್ನು ಬೆಳ್ತಂಗಡಿ ತಾಲೂಕಿಗೆ ನೀಡಿ, ತಾಲೂಕಿನ ಅಭಿವೃದ್ಧಿಗೆ ನಿರಂತರವಾದ ಹೋರಾಟದ ಮುಖಾಂತರ ಹೋರಾಟವೇ ಬದುಕನ್ನಾಗಿಸಿದ ಅಪ್ರತಿಮ ರಾಜಕಾರಣಿ, ರಾಜಕೀಯ ಬದ್ಧತೆ ಮತ್ತು ಪ್ರಭುದ್ದತೆಗೆ ಇನ್ನೊಂದು ಹೆಸರಾಗಿರುವ ವಸಂತ ಬಂಗೇರ ಅವರ ನಿಧನಕ್ಕೆ ಬೆಳ್ತಂಗಡಿ ಸೀರೋಮಲಬಾರ್ ಕ್ಯಾಥೋಲಿಕ್ ಅಸೊಸಿಯೇಷನ್ ಸಂತಾಪವನ್ನು ಸೂಚಿಸಿದೆ.

ಬೆಳ್ತಂಗಡಿ ತಾಲೂಕಿನ ಸೀರೋಮಲಬಾರ್ ಧರ್ಮಿಯರು ಒಂದು ರಾಜಕೀಯ ನೆಲೆಯನ್ನು ಕಂಡುಕೊಳ್ಳುವಲ್ಲಿ ಶ್ರೀ ವಸಂತ ಬಂಗೇರರ ಕೊಡುಗೆ ಅಪಾರ ಎಂದು ನಿರ್ದೇಶಕರಾಗಿರುವ ವಂದನಿಯ ಫಾ.ಶಾಜಿ ಮಾತ್ಯು ತಿಳಿಸಿದರು. ಜೋಯ್ ಟಿ ಜೆ ಅವರನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷ ರನ್ನಾಗಿ ಮಾಡುವ ಮೂಲಕ ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಸೀರೋ ಮಲಬಾರ್ ಕ್ರೈಸ್ತರಿಗೆ ಮರೆಯಲಾರದ ಕ್ಷಣ ಎಂದು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಧರ್ಮ ಪ್ರಾಂತ್ಯ ಸಂತಾಪ ಸಂದೇಶ ದಲ್ಲಿ ತಿಳಿಸಿದೆ.ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ, ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ಪಿ ಆರ್ ಓ ಸೇಬಾಸ್ಟಿನ್ ಪಿ ಸಿ, ಕೋಶಾಧಿಕಾರಿ ಜಿಮ್ಮಿ ಗುಂಡ್ಯ, ಸದಸ್ಯರಾದ ಜಾರ್ಜ್ ಟಿ ವಿ ಬೆನ್ನಿ ಮುದೂರು, ಶ್ರೀಮತಿ ಅಲ್ಫೋನ್ಸ ಬೆಳ್ತಂಗಡಿ,ರೀನಾ ಶಿಬಿ ಧರ್ಮಸ್ಥಳ, ಮಾತ್ಯು ಮೂರ್ನಾಡ್ ಸಂತಾಪ ಸೂಚಿಸಿದರು

Related posts

ಕರ್ನಾಟಕ ರಾಜ್ಯ ಟೈಲರ್ ಸಂಘದ ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ಆಟಿಡೊಂಜಿ ದಿನ

Suddi Udaya

ಬಳಂಜ:ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಟಾಪರ್ ಅನುಪ್ರಿಯರವರಿಗೆ ಸನ್ಮಾನ

Suddi Udaya

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya

ಆರೋಗ್ಯ ಭಾಗ್ಯ ಮತ್ತು ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಶಿರಸಿಯಿಂದ ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬಂದ ಯುವಕರ ತಂಡ

Suddi Udaya

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

Suddi Udaya

ಅಳದಂಗಡಿ ಪೇಟೆಯಲ್ಲಿ ಶಾಸಕ ಹರೀಶ್ ಪೂಂಜರವರಿಂದ ಮತಯಾಚನೆ

Suddi Udaya
error: Content is protected !!