ಬೆಳ್ತಂಗಡಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಸೈಂಟ್ ಸಾವ್ಯೂ ಆಂಗ್ಲ ಮಾದ್ಯಮ ಶಾಲೆ ಬೆಂದ್ರಾಳ ತೋಟತ್ತಾಡಿ ಇಲ್ಲಿನ ವಿದ್ಯಾರ್ಥಿನಿ ಅಶ್ರಿಫಾ ಫಾತಿಮಾ ಅವರು 625 ರಲ್ಲಿ 612 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ.
ಅಶ್ರಿಫಾ ಅವರು ಕನ್ನಡ, ಹಿಂದಿ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಪೂರ್ಣ 100 ಅಂಕಗಳನ್ನು ಪಡೆದರೆ,
ಇಂಗ್ಲೀಷ್ ನಲ್ಲಿ 118, ವಿಜ್ಞಾನದಲ್ಲಿ 98 ಮತ್ತು ಗಣಿತದಲ್ಲಿ 96 ಅಂಕಗಳನ್ನು ಪಡೆದಿದ್ದಾರೆ.
ಅಶ್ರಿಫಾ ಫಾತಿಮಾ ಅವರು ನೆರಿಯ ಗ್ರಾಮದ ಪರಪ್ಪು ನಿವಾಸಿ ಟಿಂಬರ್ ಉದ್ಯಮಿ ಅಬ್ದುಲ್ ರಹಿಮಾನ್ ಮತ್ತು ಅಸ್ಮತ್ ದಂಪತಿಯ ಪುತ್ರಿ.
ಅಶ್ರಿಫಾ ಫಾತಿಮಾ ಅವರು ಕಲಿಕೆ ಮಾತ್ರವಲ್ಲದೆ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ವಿಚಾರದಲ್ಲೂ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು.