31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ವಿದ್ವತ್ ಪಿ.ಯು. ಕಾಲೇಜು ವತಿಯಿಂದ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಚಿನ್ಮಯ್ ಜಿ.ಕೆ ರವರಿಗೆ ಸನ್ಮಾನ

ಗುರುವಾಯನಕೆರೆ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ 2ನೇ ಬ್ಯಾಂಕ್ ಗಳಿಸಿರುವ ಬೆಳ್ತಂಗಡಿಯ ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ರವರನ್ನು ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಮೇ 9ರಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿನ್ಮಯ್ ಜಿ.ಕೆ. ರವರ ತಂದೆ ಬೆಳ್ತಂಗಡಿ ಸರಕಾರಿ ಪ.ಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ, ಗಣೇಶ್ ಭಟ್ ರವರು ಹಾಜರಿದ್ದು, ಮಗನ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಚಿನ್ಮಯ್ ಜಿ.ಕೆ 625 ಕ್ಕೆ 624 ಅಂಕ ಗಳಿಸಿದ್ದು, ಈ ಅಮೋಘ ಸಾಧನೆ ಮಾಡಿದ ರಾಜ್ಯದ ಏಳೇ ಏಳು ಪ್ರತಿಭಾವಂತರಲ್ಲಿ ಒಬ್ಬನಾಗಿದ್ದಾನೆ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾಧನೆ ಗೈದಿದ್ದಾರೆ. ಚಿನ್ಮಯ್ ಜಿ.ಕೆ ಪ್ರಸ್ತುತ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ಪಡೆದುಕೊಳ್ಳುತ್ತಿದ್ದು, ಅಲ್ಲಿನ ಎಕ್ಸ್ಪರ್ಟೈಜ್ ಟೆಸ್ಟ್ಗಳಲ್ಲಿಯೂ ನಿರಂತರವಾಗಿ “ಸ್ಪಾರ್ ಪರ್ಫಾರ್ಮರ್” ಆಗಿ ಹೊರಹೊಮ್ಮಿರುವುದು ವಿಶೇಷ. ಚಿನ್ಮಯ್ ಜಿ.ಕೆ ಜೆ.ಇ.ಇ ಅಡ್ವಾನ್ಸ್ನಲ್ಲಿ ಅರ್ಹತೆ ಗಿಟ್ಟಿಸಿಕೊಂಟು ಐ.ಐ.ಟಿ. ಗೆ ಪ್ರವೇಶ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾನೆ.

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ರವರೊಂದಿಗೆ ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ವಿದ್ಯಾರ್ಥಿಗಳಾದ 617 ಅಂಕ ಗಳಿಸಿದ ಅಜಿತ್ ಎಚ್.ಸಿ., 613 ಅಂಕ ಗಳಿಸಿರುವ ಸಿಮ್ರಾ ಪರ್ವೀನ್, 602 ಅಂಕ ಗಳಿಸಿರುವ ದ್ರವೀಣ್ ಭಟ್, ಹಾಗೂ 597 ಅಂಕಗಳಿಸಿರುವ ಯಶಸ್ವಿನಿ ಜೆ.ಬಿ ಯವರನ್ನೂ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಖಜಾಂಜಿ ಎಂ.ಕೆ ಕಾಶಿನಾಥ್ ರವರು ಸನ್ಮಾನಿಸಿ ಗೌರವಿಸಿದರು.

Related posts

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಕಾರ್‍ಯದರ್ಶಿ ದಿ| ಅಶೋಕ್ ಕುಮಾರ್ ರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷರಾಗಿ ರೂಪ ಎ ಎಸ್, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಕೆ. ಆಯ್ಕೆ

Suddi Udaya

ವೇಣೂರು: ಪಡ್ಡಂದಡ್ಕ ನಿವಾಸಿ, ಹೋಟೆಲ್ ಉದ್ಯಮಿ ಹಂಝ ನಿಧನ

Suddi Udaya

3ನೇ ಹಂತದ ಪಿಎಂಶ್ರೀ ಯೋಜನೆಗೆ ಬೆಳ್ತಂಗಡಿ ಮಾದರಿ ಹಿ.ಪ್ರಾ. ಶಾಲೆ ಆಯ್ಕೆ

Suddi Udaya
error: Content is protected !!