ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುದ್ದತೆಗೆ ಹೆಸರುವಾಸಿದ ಎಂಟು ದಶಕಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ ಮುಳಿಯ ಚಿನ್ನೋತ್ಸವ ನಡೆಯಲಿದ್ದು ಇದರ ಪ್ರಯುಕ್ತ ಮಕ್ಕಳಿಗಾಗಿ ‘ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ ಮೇ.11 ರಂದು ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಅನಿತಾ ಪೂಜಾರಿ ದೀಪ ಪ್ರಜ್ವಲಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ದೈಹಿಕ ಶಿಕ್ಷಕ ಪ್ರವೀಣ್, ಮುಳಿಯ ಗ್ರಾಹಕ ಹರ್ಷ, ಮುಳಿಯ ಜ್ಯುವೆಲ್ಲರ್‍ಸ್ ಉಪವ್ಯವಸ್ಥಾಪಕ ಲೋಹಿತ್ ಕುಮಾರ್ ಉಪಸ್ಥಿತರಿದ್ದರು.
ಚಿತ್ರಕಲೆ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ 1 ರಿಂದ 6 ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಿಧಿ ಕೈರಂಗಲ, ದ್ವಿತೀಯ ಬಹುಮಾನವನ್ನು ತ್ರಿಷಾ ಗೋಳಿಯಂಗಡಿ, ತೃತೀಯ ಬಹುಮಾನವನ್ನು ಮಹೋಜಸ್ ಪಿ ಪಡೆದುಕೊಂಡರು. 6ರಿಂದ 12 ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಿನಾದ್ ಕೈರಂಗಲ, ದ್ವಿತೀಯ ಬಹುಮಾನವನ್ನು ಅನನ್ಯ ಕಕ್ಕಿಂಜೆ, ತೃತೀಯ ಬಹುಮಾನವನ್ನು ಭುವಿ ಸಜಿಪ ಪಡೆದುಕೊಂಡರು.
ಯುವ ಸಾಹಿತಿ ಚಂದ್ರಹಾಸ ಕಾರ್ಯಕ್ರಮ ನಿರೂಪಿಸಿದರು. ಮುಳಿಯ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.