25.3 C
ಪುತ್ತೂರು, ಬೆಳ್ತಂಗಡಿ
April 4, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ : ಕಾರು, ದ್ವಿಚಕ್ರ ವಾಹನ ಅಪಘಾತ

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನ ಢಿಕ್ಕಿಯಾದ ಘಟನೆ ನಡೆದಿದೆ.

ದ್ವಿಚಕ್ರ ಸವಾರರಾದ ಮಂಗಳೂರಿನ ಪ್ರಮೋದ್ ಹಾಗೂ ಚಿರಾಗ್ ಅವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ಬೆಂಗಳೂರಿನ ನೀಲೇಶ್ ಎಂಬವರು, ಅಯ್ಯಪ್ಪ ಗುಡಿ ಬದಿಯ ಅಂಗಡಿಯಿಂದ ಮುಖ್ಯ ರಸ್ತೆಯಾಗಿ ಬೆಳ್ತಂಗಡಿ ಸಾಗುವ ವೇಳೆ ಬೆಳ್ತಂಗಡಿಯಿಂದ ಮಂಗಳೂರು ಸಾಗುವ ದ್ವಿಚಕ್ರ ಸವಾರರು ಬಲಬದಿಗೆ ಏಕಾಏಕಿ ಚಲಿಸಿದ್ದರಿಂದ‌ ಕಾರು ದ್ವಿಚಕ್ರ ಮೇಲೆ ಸಾಗಿದ್ದು, ದ್ವಿಚಕ್ರ ಸವಾರ ಪ್ರಮೋದ್ ಅವರ ಕಾಲಿನ ಎಲುಬಿಗೆ ಸಣ್ಣ ಗಾಯವಾಗಿದ್ದು, ಮತ್ತೋರ್ವರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ.

ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಿಬಂದಿ ಹಾಗೂ ಸಾರ್ವಜನಿಕರು ಸಂಚಾರ ಸುಗಮಗೊಳಿಸಿದರು. ಬಳಿಕ ವಾಹನ ತೆರವುಗೊಳಿಸಲಾಯಿತು.

Related posts

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ:‌ ಬಂದಾರು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ನೆರಿಯ, ಕೊಕ್ಕಡದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ನಾಯಕರು

Suddi Udaya

ಧರ್ಮಸ್ಥಳ: ಕಲ್ಲೇರಿಯಲ್ಲಿ ನೂತನ ‘ಓಂಕಾರ’ ಮಲ್ಟಿ ಸ್ಟೋರ್ ಶುಭಾರಂಭ

Suddi Udaya

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya
error: Content is protected !!