ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾಮಾ೯ಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ವಾಹನ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಎಂಟು ಒಂಬತ್ತನೇ ತಿರುವಿನ ಮಧ್ಯೆ ಒಂಟಿ ಸಲಗ ಭಾನುವಾರ ರಾತ್ರಿ ಮತ್ತೆ ಕಂಡುಬಂದಿದೆ.
ಭಾನುವಾರ ರಾತ್ರಿ 8ರ ಸುಮಾರಿಗೆ ಕಾಡಾನೆ ರಸ್ತೆಯ ತೀರಾ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು.

ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಓಡಾಟ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ಘಾಟಿ ಪ್ರದೇಶದಲ್ಲಿ ಹಗಲು ಹೊತ್ತು ಕಂಡುಬಂದಿತ್ತು.
ಘಾಟಿ ಪರಿಸರದಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು ಮಂಜು ಕವಿದ ವಾತಾವರಣವು ಇದ್ದು ಆನೆ ಇರುವುದು ತೀರ ಸಮೀಪಕ್ಕೆ ಬರುತ್ತಿದ್ದಂತೆ ವಾಹನ ಸವಾರರಿಗೆ ತಿಳಿದುಬಂದಿತ್ತು. ಆನೆ ಕಂಡ ಜೀಪು ಚಾಲಕನೋರ್ವ ಗಲಿಬಿಲಿಗೊಂಡ ಕಾರಣ ಆನೆಯ ಸಮೀಪವೇ ವಾಹನ ಚರಂಡಿಗೆ ಇಳಿದ ಘಟನೆಯು ನಡೆಯಿತು.

ಕಾಡಾನೆ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ತಿಳಿದುಬಂದಿದೆ

Related posts

ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ಪತಿಗೆ ಕರೆ ಮಾಡಿದ್ದ ಬೆಂಗಳೂರಿನ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಕನಕದಾಸ ಜಯಂತಿ

Suddi Udaya

ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ ಹಾಗೂ ವಿವಿಧ ಸಂಘಗಳಿಂದ ರಾಮ ದೀಪೋತ್ಸವ

Suddi Udaya

ಧರ್ಮಸ್ಥಳಕ್ಕೆ ಭೇಟಿ ನೀಡಿದ ರಶ್ಯಾದ ಪ್ರವಾಸಿಗರು

Suddi Udaya

ಭಾರೀ ಮಳೆ ಹಿನ್ನೆಲೆ: ನಾಳೆ(ಆ.3) ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

Suddi Udaya

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

Suddi Udaya
error: Content is protected !!