29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯಲ್ಲಿ ಭಜನಾ ಪರಿಷತ್ತು ಕಾರ್ಯದರ್ಶಿಯಿಂದ ಅಹವಾಲು ಸ್ವೀಕಾರ

ಬೆಳ್ತಂಗಡಿ: ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿಯಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ನಡ ಇಲ್ಲಿಗೆ ಭೇಟಿ ನೀಡಿ ನಂತರ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ ಕನ್ಯಾಡಿ ಮಂಜೊಟ್ಟಿ ಇಲ್ಲಿಗೆ ಭೇಟಿ ನೀಡಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳೊಂದಿಗೆ ಭಜನಾ ಮಂಡಳಿಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಚರ್ಚಿಸಿ ಅವರಿಂದ ಅಹವಾಲುಗಳನ್ನು ಸ್ವೀಕರಿಸಿದರು ಹಾಗೂ ಭಜನಾ ಮಂಡಳಿಯ ನೊಂದಾವಣಿ, ಜಾಗದ ರೆಕಾರ್ಡ್, ಮಂಡಳಿಯ ಲೆಕ್ಕಪತ್ರಗಳು ಮತ್ತು ಭಜನಾ ಮಂಡಳಿಗೆ ಹೊಸ ಸದಸ್ಯರುಗಳನ್ನು ಸೇರಿಸಿಕೊಳ್ಳುವ ಬಗ್ಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಾಗ ಜನರ ಉಪಸ್ಥಿತಿಯನ್ನು ಹೆಚ್ಚಿಸುವ ಬಗ್ಗೆ ಮಾರ್ಗದರ್ಶನ ಮಾಡಿದರು.


ಈ ಸಂದರ್ಭದಲ್ಲಿ ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂಡಳಿಯ ಗೌರಧ್ಯಕ್ಷರಾದ ಲಿಂಗಪ್ಪಗೌಡ ಬೆರ್ಕೆ, ಸದಾಶಿವೇಶ್ವರ ಭಜನಾ ಮಂಡಳಿ ಅಧ್ಯಕ್ಷರಾದ ವಸಂತ ಶೆಟ್ಟಿ ಕಾರ್ಯದರ್ಶಿಯಾದ ಶ್ರೀಧರ ಗೌಡ ಮತ್ತು ಇನ್ನಿತರ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ವೇಣೂರು: ನಿಟ್ಟಡೆ ಕುಂಭಶ್ರೀ ಶಿಕ್ಷಣ ಸಂಸ್ಥೆಗೆ ‘ಶಿಕ್ಷಣ ಭೀಷ್ಮ ಪ್ರಶಸ್ತಿ’ಯ ಗರಿ

Suddi Udaya

ಕೊಕ್ಕಡದ ರಿತ್ವಿಕಾ ನವೋದಯ ವಿದ್ಯಾಲಯಕ್ಕೆ ಆಯ್ಕೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಮುಖ್ಯ ಕಾರ್ಯನಿರ್ವಣಧಿಕಾರಿ ಸತ್ಯ ಶಂಕರ್ ಕೆ.ಜಿರಿಗೆ ಬೀಳ್ಕೊಡುಗೆ ಹಾಗೂ ಗೌರಾರ್ಪಣೆ

Suddi Udaya

ಜೆಸಿಐ ಮಡಂತ್ಯಾರು “ವಿಜಯ 2024” ವತಿಯಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವ: ಉಜಿರೆ, ಬೆಳಾಲು, ಮಾಯಾ, ಕೊಲ್ಪಾಡಿ ಗ್ರಾಮದ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಹೆತ್ತವರ ಸಭೆ

Suddi Udaya
error: Content is protected !!