ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆಯ 8 ನೇ ವಾರ್ಷಿಕ ಹಾಗೂ 3 ನೇ ಸನದುದಾನ ಮಹಾ ಸಮ್ಮೇಳನವೂ ಮೇ 16,17,18 ದಿನಾಂಕಗಳಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾಯ೯ದಶಿ೯ ಮಅ ರೂಫ್ ಸುಲ್ತಾನಿ ಹೇಳಿದರು.
ಅವರು ಮೇ 15ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೇ 16 ರಂದು ಬೆಳಗ್ಗೆ ಮರ್ಹೂಂ ಅಸ್ಸಯ್ಯದ್ ಸಾದಾತ್ ತಂಙಳ್ ಕರುವೇಲು ಹಾಗೂ ನಚ್ಚಬೆಟ್ಟು ದರ್ಗಾ ಝಿಯಾರತ್ ಮಾಡಿ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂಜೆ 7 ಗಂಟೆಗೆ ಅಸ್ಸಯ್ಯದ್ ಶಿಹಾಬುದ್ದೀನ್ ಅಪ್ಟಲ್ ಅಲ್ ಹಾಶಿಮಿ ಮುತ್ತನ್ನೂರು ತಂಙಳ್ ರ ನೇತೃತ್ವದಲ್ಲಿ ಬೃಹತ್ ದ್ಸಿಕ್ರ್ ಹಲ್ಖಾ ನಡೆಯಲಿದ್ದು ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಉದ್ಭೋ ಧನೆ ನೀಡಲಿದ್ದಾರೆ.
ಮೇ 17 ರಂದು ರಾತ್ರಿ ಅಸ್ಸಯ್ಯದ್ ತ್ವಾಹ ತಂಙಳ್ ಹಾಗೂ ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿ ಸ್ ನಡೆಯಲಿದ್ದು ಅಸ್ಸಯ್ಯದ್ ಮುಡೀಸ್ ತಂಙಳ್ ಚೇಲಕ್ಕರ ತೃಶೂರು ದುವಾಶಿರ್ವಚನ ಮಾಡಲಿದ್ದಾರೆ.ಸಮಾರೋಪ ದಿನವಾದ ಮೇ18 ಶನಿವಾರ ಬೆಳಗ್ಗೆ 10 ಗಂಟೆಗೆ ಫುರ್ಖಾನಿ ಸಂಗಮ ಹಾಗೂ ಪದವಿ ವಸ್ತ್ರ ವಿತರಣೆ ನಡೆಯಲಿದ್ದು ಅಸ್ಸಯ್ದಿದ್ ಜಲಾಲುದ್ದೀನ್ ತಂಙಳ್ ಪೊಸೋಟು ವಿಷಯ ಮಂಡನೆ ಮಾಡಲಿದ್ದಾರೆ.
ಸಂಜೆ 4 ಕ್ಕೆ ಗಲ್ಫ್ ಮೀಟ್ ನಡೆಯಲಿದ್ದು ಅಥಾವುಲ್ಲಾ ಹಿಮಮಿ ಕುಪ್ಪೆಟ್ಟಿ, ಅಬೂಬಕ್ಕರ್ ಮದನಿ ಹೊಸಂಗಡಿ ಜುಬೈಲ್ ಮಾತನಾಡಲಿದ್ದಾರೆ. ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭವೂ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಪ್ರಸ್ತುತ ಸಂಗಮವನ್ನು ಕೆ.ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ. ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಸನದುದಾನ ಪ್ರದಾನ ಮಾಡಲಿದ್ದು ಅಸ್ಸಯ್ಯದ್ ನೂರುಸ್ಸಾದಾತ್ ಬಾಯಾರ್ ತಂಙಳ್ ಸನದುದಾನ ಭಾಷಣ ಮಾಡಲಿದ್ದು, ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಟಿ.ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ, ಅಸ್ಸಯ್ಯದ್ ಸಾದಾತ್ ತಂಙಳ್ ಗುರುವಾಯನಕೆರೆ, ಅಸ್ಸಯ್ಯದ್ ಕೂರಿಕ್ಕುಝಿ ತಂಙಳ್ ಮುಂತಾದವರು ಮುಖ್ಯಪ್ರಭಾಷಣ ಮಾಡಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ಉಜಿರೆ, ಇಸ್ಮಾಯಿಲ್ ತಂಙಳ್ ಉಜಿರೆ, ಶಿಹಾಬುದ್ದೀನ್ ತಂಙಳ್ ಮದಕ, ಅಶ್ರಫ್ ತಂಙಳ್ ಆದೂರು, ಹೈದರ್ ಮದನಿ ಕರಾಯ, ಖಾಸಿಂ ಮುಸ್ಲಿಯಾರ್ ಕರಾಯ, ಮುಹಮ್ಮದ್ ಹಾಜಿ ಸಾಗರ, ಅಬ್ದುಲ್ಲತೀಫ್ ಹಾಜಿ ಗೋಲ್ಡನ್, ಯೂಸುಫ್ ಹಾಜಿ ಗೌಸಿಯಾ ಮುಂತಾದ ಪ್ರಮುಖ ಉಲಮಾ ಉಮಾರಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರಝಾಕ್ ಸಖಾಫಿ ಮೊಡಂತ್ಯಾರು, ಎಂ.ಬಿ.ಎಂ ಸ್ವಾದಿಖ್ ಮಾಕ್ ಹಂಝ ಮದನಿ, ರಿಯಾಝ್ ಸಅದಿ , ಫಾರೂಕ್ ಸಖಾಪಿ ಉಪಸ್ಥಿತರಿದ್ದರು.