ಚಾರ್ಮಾಡಿ ಘಾಟಿ ರಸ್ತೆ ಪರಿಸರದಲ್ಲಿ ನಿರಂತರವಾಗಿ ಕಾಡಾನೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ಆರಂಭವಾಗಿದೆ.
ಕಳೆದ ಕೆಲವು ದಿನಗಳಿಂದ ಕಾಡಾನೆ ಪ್ರತಿದಿನ ಎಂಬಂತೆ ಘಾಟಿಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ತನಕವು ಸವಾರಿ ನಡೆಸುತ್ತಿದ್ದು, ರಸ್ತೆಯಲ್ಲಿ ನಿಂತು ಈಚಲ ಮರ ತಿನ್ನುವುದು ಕಂಡುಬಂದಿದೆ. ಅಲ್ಲದೆ ಹಲವು ಬಾರಿ ಹಗಲು ಹೊತ್ತಿನಲ್ಲೂ ಸಂಚಾರವನ್ನು ನಡೆಸಿ ಪ್ರಯಾಣಿಕರ ವಾಹನ ಸವಾರರರ ಭೀತಿಗೆ ಕಾರಣವಾಗಿದೆ. ಕೆಲವು ಪ್ರಯಾಣಿಕರು ಆನೆಯನ್ನು ಅಟ್ಟಲು ಯತ್ನಿಸುವುದು, ಕಲ್ಲೆಸೆಯುವುದು, ಬೊಬ್ಬೆ ಹಾಕುವುದು, ಇತ್ಯಾದಿ ಅನಗತ್ಯ ಚಟುವಟಿಕೆಗಳನ್ನು ಮಾಡುತ್ತಾ ಅಪಾಯವನ್ನು ಆಹ್ವಾನಿಸುವುದು ಕಂಡುಬರುತ್ತಿದೆ.
ನಿರಂತರವಾಗಿ ಕಾಡಾನೆ ಘಾಟಿ ರಸ್ತೆಯಲ್ಲಿ ಕಂಡು ಬರುವ ಕಾರಣ ಹಲವು ವಾಹನ ಸವಾರರು ಪ್ರಯಾಣಿಕರು ಈಗಲೂ ಭಯದಿಂದಲೇ ಸಾಗುತ್ತಿದ್ದಾರೆ..