25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಸಂತ ಬಂಗೇರರ ಉತ್ತರಕ್ರಿಯೆ ಅಂಗವಾಗಿ ಅಭಿಮಾನಿಗಳ ಸಮಾಲೋಚನಾ ಸಭೆ

ಬೆಳ್ತಂಗಡಿ: ಮೇ 8ರಂದು ನಿಧನರಾದ ಮಾಜಿ ಶಾಸಕ ಕೆ. ವಸಂತ ಬಂಗೇರರವರ ಉತ್ತರಕ್ರಿಯೆ ಮೇ 21ರಂದು ಗುರುವಾಯನಕೆರೆ-ಕುವೆಟ್ಟು ಮಂಜಿಬೆಟ್ಟು, ಎಫ್. ಎಮ್. ಗಾರ್ಡನ್ ನಲ್ಲಿ ನಡೆಯಲಿದ್ದು ಕಾರ್ಯಕ್ರಮ ಪೂರ್ವ ತಯಾರಿ ಬಗ್ಗೆ ಬಂಗೇರರ ಅಭಿಮಾನಿಗಳ ಸಭೆಯು ಮೇ 18ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದ ಸಭಾ ಭವನದಲ್ಲಿ ನಡೆಯಿತು.


ಬಂಗೇರರ ಅಭಿಮಾನಿ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಕುಮಾರ ಇಳಂತಿಲ ಕಾರ್ಯಕ್ರಮದ ಬಗ್ಗೆ ತಿಳಿಸಿ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್, ಮಾಜಿ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಪ್ರಧಾನ ಕಾರ್ಯದರ್ಶಿ ನಿತೇಶ್ ಕೋಟ್ಯಾನ್, ಜಿ. ಪ. ಮಾಜಿ ಉಪಾಧ್ಯಕ್ಷ ಧರಣೇ0ದ್ರ ಕುಮಾರ್, ಅಭಿಮಾನಿ ಬಳಗದ ಎನ್. ಲಕ್ಷ್ಮಣ ಗೌಡ ಇಂದಬೆಟ್ಟು, ಬಂಗೇರರ ಪುತ್ರಿಯರಾದ ಪ್ರೀತೀತಾ ವಿಜೇತ್, ಬಿನುತಾ ಬಂಗೇರ, ಅಳಿಯ ಧರ್ಮವಿಜೇತ್, ಕೆ. ವಸಂತ ಬಂಗೇರ ಅಭಿಮಾನಿಗಳು, ಹಿತೈಷಿಗಳು ಹಾಜರಿದ್ದರು.

Related posts

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ 1008ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 6ನೇ ಆರೋಪಿ ಮಹಮ್ಮದ್ ಶರೀಫ್ ನ್ನು ಬಂಧಿಸಿದ ಎನ್.ಐ.ಎ ಅಧಿಕಾರಿಗಳ ತಂಡ

Suddi Udaya

ಅಳದಂಗಡಿ ಅರಮನೆಗೆ ಭೇಟಿ ನೀಡಿ ಅರಸರಿಂದ ಆಶೀರ್ವಾದ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ವಿರುದ್ಧ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ

Suddi Udaya

ಡಾ. ಕುಮಾರ ಹೆಗ್ಡೆ ರವರಿಗೆ ಪ್ರತಿಷ್ಠಿತ ಜೇಸಿಯ ಉದ್ಯೋಗ ರತ್ನ ಪ್ರಶಸ್ತಿ

Suddi Udaya

ಬೆಳ್ತಂಗಡಿ ಫೆಡರೇಷನ್ ಆಫ್ ಕರ್ನಾಟಕ ಆಟೋ ಡ್ರೈವರ್ಸ್ ಯೂನಿಯನ್ ವತಿಯಿಂದ ಬಿ.ಜಿ ಆಟೋ ಡ್ರೈವರ್ಸ್ ಯೂನಿಯನ್ ಮಹಾಸಭೆ,

Suddi Udaya
error: Content is protected !!