25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಮೆಸ್ಕಾಂ ಅಧಿಕಾರಿಗೆ ಗ್ರಾಮಸ್ಥರಿಂದ ಮನವಿ

ಬೆಳ್ತಂಗಡಿ: ಕೃಷಿ ಮತ್ತು ಕುಡಿಯುವ ನೀರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವ ಬಗ್ಗೆ ಹಾಗೂ ಪಿಚಾಲಾರು ಟಿಸಿ ಮೇಲ್ದಾರ್ಜೆಗೇರಿಸುವ ಕುರಿತು ಇಂದಬೆಟ್ಟು ಗ್ರಾಮಸ್ಥರಿಂದ ಮೆಸ್ಕಾಂ ಅಧಿಕಾರಿ ಬೆಂಜಮಿನ್ ಬ್ರಕ್ಸ್ ಗೆ ಮನವಿ ನೀಡಿದರು.

ಬಂಗಾಡಿ ಕೊಲ್ಲಿ ವ್ಯಾಪ್ತಿಯ ವಿದ್ಯುತ್ ಫೀಡರ್ ನಲ್ಲಿ ಕೃಷಿ ಹಾಗೂ ಹೈನುಗಾರಿಕೆ ಮಾಡಿ ಜನ ಬದುಕುತ್ತಿದ್ದು, ಈ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಿಂದ 3 ಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಅತೀ ಲೋವೋಲ್ಟಜ್ ಸಮಸ್ಯೆ ಹಾಗೂ ಹಲವು ದಿನಗಳಿಂದ ಪ್ರತಿದಿನ ರಾತ್ರಿ ಪೂರ್ತಿ ಗಾಳಿ ಮಳೆ ಇಲ್ಲದಿದ್ದರೂ ಬೆಳಗ್ಗಿನ ಜಾವದವರೆಗೂ ವಿದ್ಯುತ್ ಇರುವುದಿಲ್ಲ, ಮಳೆಗಾಲ ಪ್ರಾರಂಭವಾದರೆ ಈ ಭಾಗದಲ್ಲಿ ಹಗಲು ರಾತ್ರಿ ಸರಿಯಾಗಿ ವಿದ್ಯುತ್ ಇರುವುದಿಲ್ಲ ಈ ಭಾಗದ ಲೈನ್ ಗಳಲ್ಲಿ ಮರದ ಗೆಲ್ಲುಗಳನ್ನು ಸರಿಯಾದ ಸಮಯದಲ್ಲಿ ಮರ ತುಂಡರಿಸದೆ ಇರುವುದು ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ. ಬಂಗಾಡಿಯ ಪಿಚಾಲಾರು ಟಿಸಿ ಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪಂಪು ಸೆಟ್ ಹಾಗೂ ಅಧಿಕ ಮನೆಗಳಿಗೆ ಸಂಪರ್ಕ ನೀಡಿರುವುದರಿಂದ ಈ ಭಾಗದ ಜನರಿಗೆ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಇಲ್ಲಿ ಹೆಚ್ಚಿನ ಸಾಮರ್ಥ್ಯದ ಟಿಸಿ ಅಳವಡಿಸಿ ಅಥವಾ ಲಿಂಗಾಂತ್ಯಾರು ಪ್ರದೇಶದಲ್ಲಿ ಹೊಸ ಟಿಸಿ ಯನ್ನು ನಿರ್ಮಿಸುವಂತೆ ಮನವಿ ಮಾಡಿದರು.

ಪಿಚಾಲರು ಹಾಗೂ ಲಿಂಗಾಂತ್ಯಾರು ಕಾಲೋನಿಯಲ್ಲಿ ಹಾದೂ ಹೋಗಿರುವ ಹೆಚ್ ಟಿ ಲೈನ್ ಗಳು 50 ವರ್ಷಗಳ ಹಳೆಯದಾಗಿದ್ದು , ತುಕ್ಕು ಹಿಡಿದು ಕರಗಿ ಹೋಗಿ ಬೀಳುವ ಅಪಾಯದ ಸ್ಥಿತಿಯಲ್ಲಿ ಇದೆ. ಹಲವಡೆ ತಂತಿಗಳ ಬದಲಾವಣೆಯು ಆಗಿಲ್ಲ , ವಿದ್ಯುತ್ ಸಮಸ್ಯೆಯ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಈ ಪರಿಸರದಲ್ಲಿರುವ ಹಳೆ ಟಿಸಿ ಗಳು ಕಾರ್ಯನಿರ್ವಹಣೆಯಾಗಿಲ್ಲ. ಸಮರ್ಪಕವಾಗಿ ವಿದ್ಯುತ್ ಕಾರ್ಯನಿರ್ವಹಣೆ ಮಾಡದೆ ಇರುವುದೇ ವಿದ್ಯುತ್ ಸಮಸ್ಯೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಮನವಿ ಮೂಲಕ ತಿಳಿಸಿದರು.

ಈ ಸಂದರ್ಭದಲ್ಲಿ ಪಳಿನಿ ಸ್ವಾಮಿ ಕೃಷಿಕರು ಎರ್ಮಾಳ, ವೆಂಕಪ್ಪ ಕೋಟ್ಯಾನ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಭರತ ಕುಮಾರ್, ತಾ. ಪಂ. ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಇಬ್ರಾಹಿಂ., ಚಂದ್ರಶೇಖರ, ಕರೀಂ, ನವೀನ್, ವೀರಪ್ಪ ಮೋಹಿಲಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಶೀಲಾವತಿ ನಿಧನ

Suddi Udaya

ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ: ಮಚ್ಚಿನ ಸರಕಾರಿ ಪ್ರೌಢಶಾಲೆಯ ಬಾಲಕರು ಹಾಗೂ ಬಾಲಕಿಯರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ನ.3: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ಬಂಟೆರೆ ತುಡರ್ ಪರ್ಬ”

Suddi Udaya

ಶ್ರೀ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತಾದಿಗಳ ಸಭೆ

Suddi Udaya

ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ನಾರಾವಿ ಶಕ್ತಿ ಕೇಂದ್ರದಲ್ಲಿ ಪೂರ್ವಭಾವಿ ಸಭೆ

Suddi Udaya

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya
error: Content is protected !!