July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶಾಸಕರ ಬಂಧನಕ್ಕೆ ಹೋದ ಪೊಲೀಸರು- ಸಂಜೆಯವರೆಗೆ ಬಿಗ್ ಹೈಡ್ರಾಮ;: ಶಾಸಕ ಹರೀಶ್ ಪೂಂಜರ ಬಂಧನ ಕೈ ಬಿಟ್ಟು ಹಿಂದಿರುಗಿದ ಪೊಲೀಸರು

ಬೆಳ್ತಂಗಡಿ: ಮೇಲಂತ ಬೆಟ್ಟು ನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ ಹಿನ್ನೆಲೆಯಲ್ಲಿ ಮೇ 22ರಂದು ಬೆಳಿಗ್ಗೆ ಪೊಲೀಸರು ಅವರನ್ನು ಬಂಧಿಸಲು ಹೋಗಿ, ಕಾರ್ಯಕರ್ತರ ಆಕ್ಷೇಪ, ವಕೀಲರುಗಳ ವಾದ ವಿವಾದಗಳ ಹೈಡ್ರಾಮಗಳು ಸಂಜೆಯವರೆಗೆ ನಡೆದು ಪೊಲೀಸರು ಶಾಸಕರ ಬಂಧನ ಕೈ ಬಿಟ್ಟು ಹಿಂತಿರುಗಿದ್ದಾರೆ.

ಮೇಲಂತಬೆಟ್ಟು ಗ್ರಾಮದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿರಾಜ್ ಅವರನ್ನು ಪೊಲೀಸರು ಅವರನ್ನು ರಾತ್ರಿ ಸಮಯ ಬಂಧಿಸಿರುವುದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರು ತಡ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಶಾಸಕ ಹರೀಶ್ ಪೂಂಜರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಮಾಯಕ ಶಶಿರಾಜ್ ಶೆಟ್ಟಿ ಬಂಧನ ಹಾಗೂ ಶಾಸಕರ ಮೇಲೆ ಹಾಕಿದ ಕೇಸ್ ಹಿಂಪಡೆಯಲು ಮೇ ೨೦ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದ ಪ್ರಕರಣ ದಾಖಲಿಸಲಾಗಿದೆ.

ಶಾಸಕ ಹರೀಶ್ ಪೂಂಜರ ಮೇಲೆ ಎರಡು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಶಾಸಕರ ಮನೆಗೆ ತೆರಳಿ ಮನೆಯಲ್ಲಿ ಇದ್ದ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಈ ಸಂದರ್ಭ ಸುದ್ದಿ ತಿಳಿದು ತಾಲೂಕಿನಾದ್ಯಂತ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕರ ಮನೆಗೆ ಆಗಮಿಸಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಶಾಸಕರ ಪರ ವಕೀಲರಾದ ಸುಬ್ರಹ್ಮಣ್ಯ ಅಗರ್ತ, ಶಂಭುಶರ್ಮ ಮಂಗಳೂರು ಮತ್ತು ಅಜೇಯ್ ಸುವರ್ಣ ಮಂಗಳೂರು ಯತೀಶ್ ಶೆಟ್ಟಿ, ಅನಿಲ್ ಕುಮಾರ್, ಉದಯ ಬಂದಾರು ಅವರು ಸ್ಥಳದಲ್ಲಿ ಉಪಸ್ಥಿತರಿದ್ದರು. ಬಂಧನಕ್ಕೆ ಮೊದಲು ಆರೋಪಿಗೆ ನೋಟಿಸ್ ನೀಡಬೇಕು. ನಿನ್ನೆಯ ಡೇಟ್ ಹಾಕಿ ಇಂದು ನೋಟಿಸ್ ನೀಡಲಾಗಿದೆ. ಕೇಸ್ ಹಾಕಿದ ಎಫ್.ಐ.ಆರ್ ಸಿಕ್ಕಿಲ್ಲ, ಒಂದು ಕೇಸಿಗೆ ನೋಟೀಸ್ ಕೊಟ್ಟಿದ್ದಾರೆ, ಇನ್ನೊಂದಕ್ಕೆ ಕೊಟ್ಟಿಲ್ಲ, ನೋಟಿಸ್ ಕೊಡದೆ ಬಂಧಿಸುವ ಹಾಗಿಲ್ಲ ಎಂದು ಶಾಸಕರ ಪರ ವಕೀಲ ವಾದಿಸಿದರು.

ಪೊಲೀಸ್ ಅಧಿಕಾರಿಗಳ ಹಾಗೂ ಶಾಸಕರ ಬೆಂಬಲಿಗರ ನಡುವೆ ವಾದ -ಪ್ರತಿವಾದ ಮುಂದುವರಿದ್ದು, ಪೊಲೀಸರು ವಿಚಾರಗೆಗಾಗಿ ಠಾಣೆಗೆ ಬರುವಂತೆ ಶಾಸಕರನ್ನು ಕೇಳಿದ್ದಾರೆ. ವಿಚಾರಣೆಗೆ ಠಾಣೆಗೆ ಬರಬೇಕಾದರೆ ಶಾಸಕರಿಗೆ ನೋಟೀಸು ನೀಡಬೇಕು. ಇದನ್ನು ನೀಡಿಲ್ಲ, ನೀಡುತ್ತೇವೆ ಎಂದು ಹೇಳುತ್ತಾರೆ. ಪೊಲೀಸರು ಶಾಸಕರ ಮನೆಗೆ ಬಂದು ಬೀಡು ಬಿಟ್ಟಿದ್ದು, ಗೃಹ ಬಂಧನ ಮಾಡಿದ್ದಾರೆ. ಶಾಸಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ ಇದರ ಬಗ್ಗೆ ಪೊಲೀಸರ ಮೇಲೂ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹಿರಿಯ ವಕೀಲ ಶಂಭು ಶರ್ಮ ತಿಳಿಸಿದರು. ಎರಡು ಕಡೆಯವರಿಂದ ವಾದ ವಿವಾದಗಳು ನಡೆಯಿತು. ಶಾಸಕರನ್ನು ವಿಚಾರಣೆಗಾಗಿ ಕರೆದೊಯ್ಯಲು ಬಂದಿರುವುದಾಗಿ ಪೊಲೀಸರು ಹೇಳಿದರೆ, ಯಾವುದೇ ನೋಟೀಸು ನೀಡದೆ ಕರೆದೊಯ್ಯಲು ಬಂದಿರುವುದಕ್ಕೆ ವಕೀಲರುಗಳು ಆಕ್ಷೇಪಿಸಿದರು. ಶಾಸಕರ ಮನೆಯಲ್ಲಿ ಕ್ಯಾ. ಬ್ರಿಜೇಶ್ ಚೌಟ, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಪ್ರತಾಪಸಿಂಹ ನಾಯಕ್, ಗಣೇಶ್ ಕಾರ್ಣಿಕ್, ಶ್ರೀನಿವಾಸ ರಾವ್, ಪ್ರಸಾದ್ ಕುಮಾರ್, ಕುಶಾಲಪ್ಪ ಗೌಡ, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕರ ಮನೆಯಲ್ಲಿ ಜಮಾಯಿಸಿದ್ದರು.

ಬೆಳಗ್ಗಿನಿಂದ ಸಂಜೆಯವರೆಗೆ ಬಹಳಷ್ಟು ಹೈಡ್ರಾಮಗಳು ನಡೆಯಿತು. ವಾದ-ವಿವಾದಗಳ ನಡೆದು ಕೊನೆಗೆ ಪೊಲೀಸರು ಶಾಸಕರನ್ನು ಬಂಧನ ಕೈ ಬಿಟ್ಟು ಬರಿ ಕೈಯಲ್ಲಿ ರಾತ್ರಿ ಹಿಂತಿರುಗಿದರು. ಶಾಸಕರನ್ನು ಬಂಧಿಸಿಯೇ ಸಿದ್ದ ಎಂಬಂತೆ ಪೊಲೀಸರು ನಾಲ್ಕು ಕೆಎಸ್‌ಆರ್‌ಪಿ ತುಕುಡಿಯನ್ನು ಗರ್ಡಾಡಿ ಪ್ರದೇಶದಲ್ಲಿ ಇರಿಸಿದ್ದರು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಎಸ್.ಐ, ವೃತ್ತ ನಿರೀಕ್ಷಕರನ್ನು ನಿಯೋಜಿಸಿದ್ದರು. .

Related posts

ಉಜಿರೆಯಲ್ಲಿ ಅರೆಭಾಷೆ ಅಭಿಮಾನಿ ಬಳಗದಿಂದ “ಆಟಿನ ನೆಂಪುಗ ” ಕಾರ್ಯಕ್ರಮ

Suddi Udaya

ಪರಸ್ಪರ ಯುವಕ ಮಂಡಲ ಈದು-ನಾರಾವಿ ನೇತೃತ್ವದಲ್ಲಿ ನಡೆಯುವ ಮಹಾಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ

Suddi Udaya

ಮೇ 26: ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಕುರಿತು ಐಇಸಿ ಚಟುವಟಿಕೆ

Suddi Udaya

ವೇಣೂರು: ಕ್ಷೇತ್ರದಲ್ಲಿ ಸರ್ವಜ್ಞ ವಾಣಿ ವೆಬ್ ಸೈಟ್ ಅನಾವರಣ

Suddi Udaya

ಬುರುಡೆ ಪ್ರಕರಣ; ಬೆಂಗಳೂರು ಜಯಂತ್.ಟಿ ಮನೆಯಲ್ಲಿ ಎಸ್.ಐ.ಟಿ ಶೋಧ ಕಾರ್ಯ ಅಂತ್ಯ

Suddi Udaya
error: Content is protected !!