ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

Updated on:

ಬೆಳ್ತಂಗಡಿ: ಮೇಲಂತಬೆಟ್ಟುನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ
ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ ಹಿನ್ನೆಲೆಯಲ್ಲಿ ಮೇ 22 ರಂದು ಬೆಳಿಗ್ಗೆ ಪೊಲೀಸರು ಅವರ ಮನೆಗೆ ಬಂಧನಕ್ಕೆ ಹೋಗಿದ್ದು, ಆರೋಪಿಗೆ ಯಾವುದೇ ನೋಟೀಸು ನೀಡದೆ ಪೊಲೀಸರು ಅವರ ಮನೆಗೆ ಬಂದಿದ್ದಾರೆ. ಶಾಸಕರ ಕೆಲಸ ಕಾರ್ಯಗಳಿಗೆ ಅಡ್ಡಿ ಪಡಿಸಿ ಅವರಿಗೆ ಗೃಹಬಂಧನ ಮಾಡಿದ ಹಾಗೆ ಮಾಡಿದ್ದಾರೆ ಇದರ ವಿರುದ್ಧ ಪೊಲೀಸರ ಮೇಲೂ ಕಾನೂನು ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಶಾಸಕರ ಪರ ಹಿರಿಯ ವಕೀಲರಾದ ಕೆ.ಶಂಭು ಶರ್ಮ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.


ಮೇಲಂತಬೆಟ್ಟು ಗ್ರಾಮದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿರಾಜ್ ಅವರನ್ನು ಪೊಲೀಸರು ಅವರನ್ನು ರಾತ್ರಿ ಸಮಯ ಬಂಧಿಸಿರುವುದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರು ತಡರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಶಾಸಕ ಹರೀಶ್ ಪೂಂಜರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಮಾಯಕ ಶಶಿರಾಜ್ ಶೆಟ್ಟಿ ಬಂಧನ ಹಾಗೂ ಶಾಸಕರ ಮೇಲೆ ಹಾಕಿದ ಕೇಸ್ ಹಿಂಪಡೆಯಲು ಮೇ 20 ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.


ಶಾಸಕ ಹರೀಶ್ ಪೂಂಜರ ಮೇಲೆ ಎರಡು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಮೇ 22 ರಂದು ಶಾಸಕರ ಮನೆಗೆ ತೆರಳಿ ಮನೆಯಲ್ಲಿ ಇದ್ದ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾಯ೯ಕತ೯ರು ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದರು.


ಬಂಧನಕ್ಕೆ ಮೊದಲು ಆರೋಪಿಗೆ ನೋಟಿಸ್ ನೀಡಬೇಕು. ನಿನ್ನೆಯ ಡೆಟ್ ಹಾಕಿ ಇಂದು ನೋಟಿಸ್ ನೀಡಲಾಗಿದೆ. ಕೇಸ್ ಹಾಕಿದ ಎಫ್.ಐ.ಆರ್ ಸಿಕ್ಕಿಲ್ಲ, ಒಂದು ಕೇಸಿಗೆ ನೋಟೀಸ್ ಕೊಟ್ಟಿದ್ದಾರೆ, ಇನ್ನೊಂದಕ್ಕೆ ಕೊಟ್ಟಿಲ್ಲ, ನೋಟಿಸ್ ಕೊಡದೆ ಬಂಧಿಸುವ ಹಾಗಿಲ್ಲ ಎಂದು ಶಾಸಕರ ಪರ ವಕೀಲ ಸುಬ್ರಹ್ಮಣ್ಯಕುಮಾರ್ ಅಗರ್ತ ವಾದಿಸಿದರು. ಪೊಲೀಸ್ ಅಧಿಕಾರಿಗಳ ಹಾಗೂ ಶಾಸಕರ ಬೆಂಬಲಿಗರ ನಡುವೆ ವಾದ -ಪ್ರತಿವಾದ ಮುಂದುವರಿದ್ದು, ಪೊಲೀಸರು ವಿಚಾರಗೆಗಾಗಿ ಠಾಣೆಗೆ ಬರುವಂತೆ ಶಾಸಕರನ್ನು ಕೇಳಿದ್ದಾರೆ. ವಿಚಾರಣೆಗೆ ಠಾಣೆಗೆ ಬರಬೇಕಾದರೆ ಶಾಸಕರಿಗೆ ನೋಟೀಸು ನೀಡಬೇಕು. ಇದನ್ನು ನೀಡಿಲ್ಲ, ನೀಡುತ್ತೇವೆ ಎಂದು ಹೇಳುತ್ತಾರೆ. ಪೊಲೀಸರು ಶಾಸಕರ ಮನೆಗೆ ಬಂದು ಬೀಡು ಬಿಟ್ಟಿದ್ದು, ಗೃಹ ಬಂಧನ ಮಾಡಿದ್ದಾರೆ. ಶಾಸಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ ಇದರ ಬಗ್ಗೆ ಪೊಲೀಸರ ಮೇಲೂ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹಿರಿಯ ವಕೀಲ ಶಂಭು ಶರ್ಮ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ವಕೀಲ ಅನಿಲ್‌ಕುಮಾರ್ ಉಪಸ್ಥಿತರಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಮಾಜಿ ಶಾಸಕ ಸಂಜೀವ ಮಠಂದೂರು, ಹಾಗೂ ಬಿಜೆಪಿ ಪ್ರಮುಖ ನಾಯಕರು ಆಗಮಿಸಿದ್ದಾರೆ.

Leave a Comment

error: Content is protected !!