ಬೆಳ್ತಂಗಡಿ: ಯಾವುದೇ ಕೇಸ್ ನಲ್ಲಿ ವಿಚಾರಣೆಗೆ ಬರಲು ಪೊಲೀಸರು ನೋಟಿಸ್ ನೀಡುವುದು ಸಾಮಾನ್ಯ ಪ್ರಕ್ರಿಯೆ. ಶಾಸಕ ಹರೀಶ್ ಪೂಂಜರ ಮೇಲಿನ ಕೇಸಿನಲ್ಲೂ ನೋಟಿಸ್ ನೀಡಲು ಹೋದಾಗ ಶಾಸಕರು ಮಂಗಳೂರಿಂದ ವಕೀಲರುಗಳನ್ನು ಕರೆಸಿ, ಕಾಯ೯ಕತ೯ರನ್ನು ಗುರಾಣಿ ಯಾಗಿ ಬಳಸಿ ದೊಡ್ಡ ಡ್ರಾಮಾ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷೀತ್ ಶಿವರಾಂ ಹೇಳಿದರು.
ಅವರು ಮೇ 23 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟಕ ಸಿಕ್ಕಿದ್ದು, ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದಾಗ ಶಾಸಕರು ಠಾಣೆಗೆ ಹೋಗಿ ಎಎಸ್ಐಗೆ ಅವಾಚ್ಯ ಶಬ್ದಗಳಿಂದ ಬೈದ ಬಗ್ಗೆ ಹಾಗೂ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ ಪೊಲೀಸರಿಗೆ ನಿಂದನೆ ಮಾಡಿರುವ ಬಗ್ಗೆ ಎರಡು ಕೇಸ್ ಆಗಿದೆ. ಪೊಲೀಸರು ರೇವಣ್ಣ ಅವರನ್ನೆ ಬಿಟ್ಟಿಲ್ಲ, ಮತ್ತೆ ಶಾಸಕರನ್ನು ಬಿಡ್ತಾರಾ, ಈ ಕೇಸ್ ವಿಚಾರಣೆಗೆ ನೋಟಿಸ್ ನೀಡಲು ಹೋದಾಗ ಶಾಸಕರು ಭಯಗೊಂಡು ಡ್ರಾಮಾ ಮಾಡಿದ್ದಾರೆ. ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದು ಘೋಷಿಸಿದವರು ಕೈ, ಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಸಂಸದ ನಳಿನ್ ಕುಮಾರ್ ಅವರ ಮಾತಿಗೆ ಒಪ್ಪಿ ಪೊಲೀಸರು ಹಿಂದಕ್ಕೆ ಬಂದಿದ್ದಾರೆ. ರಾತ್ರಿ ಬಂದು ಹೇಳಿಕೆ ನೀಡಿದ್ದಾರೆ. ಹರೀಶ್ ಪೂಂಜ ನಮಗೂ ಶಾಸಕರು ಒಬ್ಬ ನ್ಯಾಯವಾದಿಯಾಗಿ, ಶಾಸಕನಾಗಿ ಜನರಿಗೆ ನ್ಯಾಯ ಒದಗಿಸಬೇಕಾದ ವ್ಯಕ್ತಿ ಪೊಲೀಸರ ಎದುರು ನಿಲ್ಲುವ ಪರಿಸ್ಥಿತಿ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಕೂಡಾ ಉದ್ವೇಗದಲ್ಲಿ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಭಾಷಣದಲ್ಲಿ ಬೇಲ್ ತೆಗೆದು ಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಠಾಣೆಯಲ್ಲಿ ತೆಗೆದುಕೊಂಡಿರುವೂದು ಏನು ಎಂದು ಪ್ರಶ್ನಿಸಿದರು.
ಬೆಳ್ತಂಗಡಿ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ. ಹಲವು ಮಂದಿ ಶಾಸಕರುಗಳು ಆಗಿ ಹೋಗಿದ್ದಾರೆ. ಆದರೆ ಈ ರೀತಿ ಯಾರೂ ಮಾಡಿಲ್ಲ ಎಂದು ತಿಳಿಸಿದರು. ಯಾರೂ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು, ಉತ್ತರ ಕುಮಾರನ ಪೌರುಷ ತೋರಿಸುವುದು ಸರಿಯಲ್ಲ, ಸ್ಫೋಟಕ ಸಿಕ್ಕಿದ್ದು , ಇದರ ಹಿಂದಿರುವವರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿ.ಪಂ ಮಾಜಿ ಸದಸ್ಯ ಧರಣೇಂದ್ರ ಕುಮಾರ್, ಪ್ರಮುಖ ನಾಯಕರುಗಳಾದ ನೇಮಿರಾಜ ಕಿಲ್ಲೂರು, ಶಾಫಿ ಉಪಸ್ಥಿತರಿದ್ದರು.