April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಹಿಳೆಯ ಬ್ಯಾಗ್ ನಲ್ಲಿ ಇರಿಸಿದ್ದ ರೂ. 2 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಲ್ಮಂಜ : ಮಹಿಳೆಯು ಬಿ.ಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಯುನಿಟಿ ಬ್ಯಾಗ್ ನಲ್ಲಿ ಇರಿಸಿದ್ದ ಚಿನ್ನಾಭರಣಗಳ ಕಳವುಗೊಂಡಿರುವ ಬಗ್ಗೆ ಮೇ 23 ರಂದು ವರದಿಯಾಗಿದೆ.

ಕಲ್ಮಂಜ ಗ್ರಾಮದ ನಿಡಿಗಲ್ ಆರ್ದಶ ನಗರ ನಿವಾಸಿ ಶಶಿಕಲ ಎಂಬುವವರ ದೂರಿನಂತೆ, ಮೇ 23 ರಂದು ಬೆಳಗ್ಗೆ, ಶಶಿಕಲಾರವರು ಯುನಿಟಿ ಬ್ಯಾಗ್ನಲ್ಲಿ ತವರು ಮನೆಯವರು ಹಾಗೂ ಗಂಡನ ಮನೆಯವರು ಉಡುಗೊರೆಯಾಗಿ ನೀಡಿದ ವಿವಿಧ ಶೈಲಿಯ ವಿವಿಧ ಮಾದರಿಯ ಒಟ್ಟು 45 ಗ್ರಾಂ ಚಿನ್ನಾಭರಣಗಳನ್ನು ಇರಿಸಿಕೊಂಡು, ಪತಿ ಮತ್ತು ಚಿಕ್ಕ ಮಗುವಿನ ಜೊತೆಯಲ್ಲಿ ಕಲ್ಲಡ್ಕದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಂದು, ಬಿ ಸಿ ರೋಡ್ ಬಸ್ಸಿನಿಂದ ಇಳಿದಿರುತ್ತಾರೆ. ಬಳಿಕ ರಸ್ತೆದಾಟಿ ಬಿ ಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಸ್ವೀಟ್ಸ್ ಅಂಗಡಿಗೆ ತೆರಳಿದ್ದು, ಈ ವೇಳೆ ಸದ್ರಿಯವರ ಬ್ಯಾಗಲ್ಲಿ ಚಿನ್ನಾಭರಣಗಳಿರುತ್ತದೆ. ಸ್ವಲ್ಪ‌ ಸಮಯದ ಬಳಿಕ, ಬಿ.ಸಿ ರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ, ಶಶಿಕಲಾ ರವರ ಬ್ಯಾಗಲ್ಲಿದ್ದ 45 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುತ್ತದೆ. ಅವುಗಳ ಅಂದಾಜು ಮೌಲ್ಯ ರೂ. 2 ಲಕ್ಷ ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ, ಅ.ಕ್ರ: 91/2024 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಅಕ್ಟೋಬರ್ 2ರಂದು ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ಗಾಂಧಿ ಜಯಂತಿ ಆಚರಣೆಗೆ ನಿರ್ಧಾರ: ತಾ. ಜನಜಾಗೃತಿ ವೇದಿಕೆ ಸಭೆ

Suddi Udaya

ಮಿತ್ತಬಾಗಿಲು ಪ್ರೌಢ ಶಾಲೆಯಲ್ಲಿಎಸ್ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯ ಸಮಾರೋಪ ಸಮಾರಂಭ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವೈದ್ಯಕೀಯ ನೆರವು

Suddi Udaya

ಬಜೆಟ್ ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ:ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ : ಶೇಖರ್ ಲಾಯಿಲ

Suddi Udaya

ಮಡಂತ್ಯಾರು: ಬಿ ಎಂ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಸಭೆ

Suddi Udaya

ಪಡಂಗಡಿ ಗ್ರಾ.ಪಂ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya
error: Content is protected !!