ಬೆಳ್ತಂಗಡಿ: ಬಿದಿರು ಸೊಸೈಟಿ ಆಫ್ ಇಂಡಿಯಾ, ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿ.) ಇವರ ಸಹಕಾರದೊಂದಿಗೆ ಜೂ 01 ರಂದು ಶನಿವಾರ ಪೂರ್ವಾಹ್ನ 10-30 ರಿಂದ ಬಿದಿರು ಕೃಷಿ ಮಾಹಿತಿ ಹಾಗೂ ಬಿದಿರು ತೋಟ ಭೇಟಿ ಕಾರ್ಯಕ್ರಮವನ್ನು ಅಪ್ಪೆಲ ಶ್ರೀ ಉಮಾಪಂಚಲಿಂಗೇಶ್ವರ ದೇವಸ್ಥಾನ, ಅಪ್ಪೆಲ ಬಯಲು ನೆರಿಯಾ ಇಲ್ಲಿ ಏರ್ಪಡಿಸಲಾಗಿದೆ.
ನೊಂದಾಯಿಸಿಕೊಂಡ 50 ಜನ ಕೃಷಿಕರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಕಾರ್ಯಕ್ರಮದಲ್ಲಿ ಬಿದಿರು ಸೊಸೈಟಿ ಆಫ್ ಇಂಡಿಯಾ ಇಲ್ಲಿನ ತಜ್ಞರು ಬಿದಿರು ಕೃಷಿ ವಿಧಾನ ಮತ್ತು ಬಿದಿರು ಉತ್ಪನ್ನ ಮಾರಾಟ ಅವಕಾಶದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಆಸಕ್ತರು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿ.) ಕೇಂದ್ರ ಕಛೇರಿಯನ್ನು ಸಂಪರ್ಕಿಸಿ, ಪ್ರವೇಶ ಶುಲ್ಕ ರೂ 100/- ಮಾತ್ರ ನೀಡಿ ಹೆಸರು ನೋಂದಾಯಿಸಲು ಅವಕಾಶವಿರುತ್ತದೆ. ಪ್ರಥಮವಾಗಿ ನೋಂದಾಯಿಸಿಕೊಂಡ 50 ಕೃಷಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ 08256-200183, 200783