September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

ಬೆಳ್ತಂಗಡಿ: ಅನ್ನ ಬಸಿಯುತ್ತಿರುವಾಗ ಆಕಸ್ಮಿಕವಾಗಿ ಅನ್ನದ ಪಾತ್ರೆಯು ಮೈ ಮೇಲೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಳ್ಳುತ್ತಿರುವ ಕೊಯ್ಯೂರು ಗ್ರಾಮದ ಕಿರಿಯಾಡಿ ಕೊಡಂಗೆ ನಿವಾಸಿ ಯಶೋಧರ ಇವರಿಗೆ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯಿಂದ ಚಿಕಿತ್ಸಾ ಸಹಾಯಾರ್ಥವಾಗಿ ರೂ.20,000/-ದ ಚೆಕ್ ನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ನಿರ್ದೇಶಕ ಆನಂದ ಗೌಡ ಉಜಿರೆ ಇವರ ಮೂಲಕ ಫಲಾನುಭವಿಯ ಪತ್ನಿಗೆ ಹಸ್ತಾಂತರ ಮಾಡಲಾಯಿತು.


ಈ ಸಂಧರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟಪೂರ್ವ ಕಾರ್ಯದರ್ಶಿ ಹಾಗೂ ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ ಗೌಡ ಕೊಯ್ಯೂರು, ಸೀತಾರಾಮ್ ಸೌರಭ ಬೆಳಾಲು, ವಾಣಿ ಸೌಹಾರ್ದ- ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸುರೇಶ್ ಕೌಡಂಗೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಮೀನಾಕ್ಷಿ ಮಹಾಬಲ ಗೌಡ ಉಪಸ್ಥಿತರಿದ್ದರು.

Related posts

ಹೊಸಂಗಡಿ ಗ್ರಾ.ಪಂ. ನ ನೇತೃತ್ವದಲ್ಲಿ ಕುರ್ಲೋಟ್ಟು ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ರವರನ್ನು ಅಭಿನಂದಿಸಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ನಾವೂರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ನಿಡ್ಲೆ , ಬೂಡುಜಾಲು ಗ್ರಾಮಸ್ಥರಿಂದ ರಸ್ತೆ ದುರಸ್ತಿ

Suddi Udaya

ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಸ್ವಾತಂತ್ರ್ಯ ಆಚರಣೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 344 ಕೋಟಿ ವಾರ್ಷಿಕ ವ್ಯವಹಾರ: 1 ಕೋಟಿ 9 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 12.50 ಡಿವಿಡೆಂಟ್ ಘೋಷಣೆ:

Suddi Udaya
error: Content is protected !!