ಉಜಿರೆ : ಮೇ 28ರಂದು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಎಸ್.ಡಿ.ಎಮ್ ಶಾಲಾ ಬೋಧಕ ವೃಂದಕ್ಕೆ ‘ಅನುಭವದ ಕಲಿಕೆ’ ಕಾರ್ಯಗಾರ ನಡೆಯಿತು.
ಎಸ್.ಡಿ.ಎಮ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಲರಾದ ಡಾ.ಎ ಜಯಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಎಸ್.ಡಿ.ಎಮ್ ತತ್ವಗಳು, ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಕುರಿತು ತಮ್ಮ ಮಾತುಗಳನ್ನು ಶಿಕ್ಷಕ ವೃಂದದೊಂದಿಗೆ ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ನೋಲ್ಡನ್ಬ್ರಿಡ್ಜ್ ಫೌಂಡೇಶನ್ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ಸೋಜೊ ವರ್ಗಿಸ್ ಇವರು ತರಗತಿಯಲ್ಲಿ ಅನುಭವ ಕಲಿಕೆಯ ಕುರಿತು ಪ್ರಾಯೋಗಿಕ ಕಲಿಕೆಯೊಂದಿಗೆ ಶಿಕ್ಷಕರಿಗೆ ಮಾಹಿತಿ ನೀಡಿದರು.
ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಇವರು ಶಿಕ್ಷಕರಿಗೆ ಶುಭನುಡಿಗಳೊಂದಿಗೆ ‘ಶಿಕ್ಷಕರು ನಿರಂತರ ವಿದ್ಯಾರ್ಥಿಗಳಾಗಿರಬೇಕು’ ಎಂದು ಕಿವಿಮಾತು ಹೇಳಿದರು.
ಕಾರ್ಯಗಾರದಲ್ಲಿ ಶಿಕ್ಷಕಿಯರಾದ ಕಲ್ಯಾಣಿ ನಿರೂಪಿಸಿ, ಸುಜನ ವಂದಿಸಿ, ಭವ್ಯ ಹಾಗೂ ಚೇತನಾ ಅತಿಥಿ ಪರಿಚಯ, ರವೀನ ವಂದಿಸಿದರು.