September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಅಶಕ್ತರ ಮನೆ ಬಾಗಿಲಿಗೆ ಆಧಾರ್ ಸೇವೆ

ಬೆಳ್ತಂಗಡಿ : ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಧರ್ಮಸ್ಥಳ ಹಾಗೂ ಓಡಿಲ್ನಾಳ ಅಂಚೆ ವ್ಯಾಪ್ತಿಯಲ್ಲಿ ಬರುವಂತಹ 6 ಅಶಕ್ತರ ಮನೆ ಬಾಗಿಲಿಗೆ ಹೋಗಿ ಆಧಾರ್ ಸೇವೆಯನ್ನು ನೀಡಲಾಯಿತು.


ಆಧಾರ್ ಅಪ್ಡೇಟ್ ಹಾಗೂ ಸೀಡಿಂಗ್ ಮಾಡದೆ ಇದ್ದ ಕಾರಣ ಸರ್ಕಾರದಿಂದ ಬರುತ್ತಿದ್ದ ಮಾಸಿಕ ವೇತನವು ಸ್ಥಗಿತವಾಗಿತ್ತು.
ಅಂಚೆ ಸಿಬ್ಬಂದಿ ವರ್ಗ ಪುತ್ತೂರು ವಿಭಾಗದ ವತಿಯಿಂದ ಹಿರಿಯ ಜೀವಗಳ ಹಾಗೂ ಶಾಶ್ವತ ಅಂಗ ವೈಕಲ್ಯದಿಂದ ಬಳಲುತ್ತಿರುವ ಸುಮಾರು ಆರು ಮನೆಗಳಿಗೆ ತೆರಳಿ ತಡರಾತ್ರಿ 9 ಗಂಟೆಯ ವರೆಗೂ ಆಧಾರ್ ಅಪ್ಡೇಟ್ ಮಾಡಲಾಯಿತು.


ವಿಭಾಗದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಭಾಗವು ಇನ್ನಷ್ಟೂ ಅಶಕ್ತರಿಗೆ ಈ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿದೆ.

Related posts

ಚಾರ್ಮಾಡಿ ಘಾಟ್ ನಲ್ಲಿ ಎರಡು ವಾಹನಗಳು ರಸ್ತೆಗೆ ಪಲ್ಟಿ

Suddi Udaya

ಪಣಕಜೆ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ರೇಷ್ಮೆರೋಡ್: ಅಶ್ವತನಗರ ನವರಾತ್ರಿ ಪೂಜೆ

Suddi Udaya

ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪ ನಿಧನ: ಡಾ. ಹೆಗ್ಗಡೆಯವರಿಂದ ಸಂತಾಪ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಚಾರ್ಮಾಡಿ ಘಾಟ್: ರಸ್ತೆಗೆ ಬಿದ್ದ ಮರ, ಸಂಚಾರ ತಾತ್ಕಾಲಿಕ ಸ್ಥಗಿತ

Suddi Udaya
error: Content is protected !!