ಧರ್ಮಸ್ಥಳ : ಇಲ್ಲಿಯ ನೇತ್ರಾವತಿ ಸ್ಥಾನಘಟ್ಟದ ಬಳಿ ಅಪರಿಚಿತ ವಾಹನವೊಂದನ್ನು, ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ, ರಾಕೇಶ್ ರವರು ಚಲಾಯಿಸುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ಮೇ 28ರಂದು ನಡೆದಿದೆ.
ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿವಾಸಿ ಮನೋಜ್ (42), ರವರ ದೂರಿನಂತೆ, ಮೇ. 28 ರಂದು ಮಧ್ಯಾಹ್ನ KA 19 HG 1142 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ರಾಕೇಶ್ ರವರು, ಸಹಸವಾರನನ್ನಾಗಿ ಯಜ್ಞೇಶ ರವರನ್ನು ಕುಳ್ಳಿರಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ಥಾನಘಟ್ಟದ ಬಳಿ ತಲುಪುತ್ತಿದ್ದಂತೆ, ಅವರ ಹಿಂದಿನಿಂದ ಅಪರಿಚಿತ ವಾಹನವೊಂದನ್ನು, ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ, ರಾಕೇಶ್ ರವರು ಚಲಾಯಿಸುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿರುತ್ತಾರೆ.
ಪರಿಣಾಮ ದ್ವಿ ಚಕ್ರ ವಾಹನ ಸವಾರ ಮತ್ತು ಸಹ ಸವಾರ ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ತೀವ್ರ ರಕ್ತಗಾಯಗೊಂಡಿರುವುದಾಗಿದೆ. ಗಾಯಾಳುಗಳ ಪೈಕಿ ರಾಕೇಶ್ ರವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಹಾಗೂ ಯಜ್ಞೇಶ್ ರವರು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಅಪಘಾತ ನಡೆಸಿದ ಅಪರಿಚಿತ ವಾಹನವನ್ನು ಅದರ ಚಾಲಕ ಅಪಘಾತದ ಬಳಿಕ ನಿಲ್ಲಿಸದೇ ಗಾಯಾಳುಗಳನ್ನು ಉಪಚರಿಸದೇ, ಸಂಬಂಧಪಟ್ಟವರಿಗೆ ಮಾಹಿತಿ ನೀಡಿದೇ ವಾಹನ ಸಮೇತ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 66/2024, ಕಲಂ: 279 ,337 ,338 ಭಾ ದಂ ಸಂ 134 (a&b) ಹಾಗೂ 187 ಐ ಎಂ ವಿ ಕಾಯ್ದೆ ಯಂತೆ ಪ್ರಕರಣ ದಾಕಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.