25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ಘಟಕದ ಕೋರ್ ಕಮಿಟಿಯ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕು ಮತ್ತು ಜನಜಾಗೃತಿ ಪ್ರಾದೇಶಿಕ ಕಚೇರಿ ಬೆಳ್ತಂಗಡಿಯ, ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ಕಚೇರಿಯ “ಶೌರ್ಯ” ವಿಪತ್ತು ಘಟಕದ ಕೋರ್ ಕಮಿಟಿಯ ಸಭೆಯನ್ನು ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಸಮಿತಿಯ ಅಧ್ಯಕ್ಷ ಸೀತಾರಾಮ ದೀಪ ಪ್ರಜ್ವಲಿಸಿ ಉದ್ಘಾಟಿಸಿ ನಿರಂತರವಾಗಿ ಶ್ರಮವಹಿಸಿ ಸಮಾಜಕ್ಕೆ ತನ್ನದೇ ಆದ ಸೇವೆಯನ್ನು “ಶೌರ್ಯ” ವಿಪತ್ತು ಘಟಕದ ಮೂಲಕವಾಗಿ ನೀಡುತ್ತಿರುವ ಎಲ್ಲ ಸ್ವಯಂ ಸೇವಕರಿಗೆ ಶುಭ ಹಾರೈಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಂತೆ ಕರ್ನಾಟಕ ರಾಜ್ಯದ 90 ತಾಲೂಕಿನಲ್ಲಿ 10300 ಸ್ವಯಂಸೇವಕರ ಬಲಿಷ್ಠ ತಂಡ ಇಡೀ ಕರ್ನಾಟಕ ರಾಜ್ಯದ್ಯಂತ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರ ತುರ್ತು ಸ್ಪಂದನೆಯ ಸಂದರ್ಭದಲ್ಲಿ ಸ್ಪಂದನೆಯನ್ನು ನೀಡಿ ಇಡೀ ರಾಜ್ಯದ ಮೆಚ್ಚುಗೆಯನ್ನು ಗಳಿಸಿದ್ದು, ಇದರ ಪ್ರಥಮ ಪ್ರಯೋಗಶಾಲೆಯಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಗೊಂಡ ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ಘಟಕದ ಈ ಕಾರ್ಯಕ್ರಮವು ಕರ್ನಾಟಕ ಸರಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೆಚ್ಚುಗೆಯನ್ನು ಕೂಡ ಗಳಿಸಿದೆ.

ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ರವರು ಈ ಕಾರ್ಯಕ್ರಮವು ಪ್ರತಿ ಗ್ರಾಮದಲ್ಲಿಯೂ ಈ ತಂಡವನ್ನು ಬಲಿಷ್ಠವಾಗಿ ಕಟ್ಟಿ ಇನ್ನು ಮಳೆಗಾಲದ ಸಂದರ್ಭದಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆಗಳು ತನ್ನ ಊರಿನಲ್ಲಿ ಪಕ್ಕದ ಊರಿನಲ್ಲಿ ತಾಲೂಕಿನಲ್ಲಿ ಪಕ್ಕದ ತಾಲೂಕಿನಲ್ಲಿ ಸಂಭವಿಸಿದಾಗ ತಕ್ಷಣವಾಗಿ ರಾತ್ರಿ ಹಗಲಿನ್ನದೇ ತಾವು ಸೇವೆಯನ್ನು ನೀಡಲು ಬದ್ದರಿರಬೇಕು ಇದಕ್ಕೆ ಪೂರಕವಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡು ಎಲ್ಲಾ ಘಟಕದ ಸ್ವಯಂಸೇವಕರು ನಿರಂತರವಾಗಿ ಈ ಸೇವೆಗೆ ಕಟ್ಟಿಬದ್ಧರಾಗಿರಬೇಕೆಂದು ತಿಳಿಸಿದರು.

“ಶೌರ್ಯ” ವಿಪತ್ತು ಘಟಕದ ರಾಜ್ಯ ಯೋಜನಾಧಿಕಾರಿಗಳಾದ ಜೈವಂತ ಪಟಗಾರರವರು ಪ್ರತಿ ಘಟಕವಾರು ಇರುವಂತಹ ಸ್ವಯಂಸೇವಕರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರತಿ ಘಟಕವಾರು ವಿಮರ್ಷಿಸಿ ಸಲಹೆ ಸೂಚನೆಯನ್ನು ನೀಡಿದರು,

ಸಭೆಯಲ್ಲಿ ಬೆಳ್ತಂಗಡಿಯ ಮಾಸ್ಟರ್ ಸ್ನೇಕ್ ಪ್ರಕಾಶ್, ಬೆಳ್ತಂಗಡಿಯ ಕ್ಯಾಪ್ಟನ್ ಸಂತೋಷ್, ಗುರುವಾಯನಕೆರೆಯ ಕ್ಯಾಪ್ಟನ್ ಸತೀಶ್, ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿಯಾದ ಗಣೇಶ ಆಚಾರ್ಯ,
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ಗುರುವಾಯನಕೆರೆ ತಾಲೂಕಿನ ಯೋಜನಾಧಿಕಾರಿ ದಯಾನಂದ, ಉಪಸ್ಥಿತರಿದ್ದು ಶುಭ ಹಾರೈಸಿದರು.

ತಾಲೂಕಿನ ಎಲ್ಲ ಘಟಕದ ಘಟಕ ಪ್ರತಿನಿಧಿಗಳು, ಘಟಕದ ಸಂಯೋಜಕರು ಹಾಗೂ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ವಸಂತ ,ಹರೀಶ ಕೃಷಿ ಅಧಿಕಾರಿಯಾದ ರಾಮ್ ಕುಮಾರ್ ರವರು ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ, ನಿರೂಪಿಸಿದರು.

Related posts

ಜಾನಪದ ಕಡಲೋತ್ಸವ: ಜಿಲ್ಲಾ ಪರಿಷತ್ ಪ್ರಶಸ್ತಿಗೆ ಕೊಕ್ಕಡದ ಕಿಟ್ಟ ಮಲೆಕುಡಿಯ ರವರು ಆಯ್ಕೆ

Suddi Udaya

ವೇಣೂರು: ಪೆರಿಂಜೆ ನಿವಾಸಿ ಪಿ.ಉಸ್ಮಾನ್ ನಿಧನ

Suddi Udaya

ವೇಣೂರು: ಮೂಡುಕೋಡಿ ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ನಿಧನ

Suddi Udaya

ಅರಸಿನಮಕ್ಕಿ : ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ : ತೋಟಗಾರಿಕೆ ಬೆಳೆಗಳಿಗೆ ರಿಯಾಯಿತಿ ದರದಲ್ಲಿ ಔಷಧಿಗಳು ಲಭ್ಯ

Suddi Udaya

ನಾರಾವಿ: ಸಂತ ಅಂತೋನಿ ಪ.ಪೂ. ಕಾಲೇಜಿನ ಪ್ರಥಮ ಪ.ಪೂ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸ್ವಾಗತ ಕಾರ್ಯಕ್ರಮ

Suddi Udaya
error: Content is protected !!