24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

ಬೆಳ್ತಂಗಡಿ: ಭಾರತ ರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಮಾಲಾಡಿ, ಇದರ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆಯನ್ನು‌ ಇತ್ತೀಚೆಗೆ ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷ ಗಣೇಶ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಬಳಿಕ‌ ಆಟೋಟ ಸ್ಪರ್ಧೆಗಳು ನಡೆದು, ಸಂಜೆ ಸಮಾರೋಪ ಸಮಾರಂಭ ನಡೆಯಿತು.. ‌ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಯುವಕ‌ ಸಂಘ(ರಿ) ಕಕ್ಯೇಪದವು ಇದರ ಅಧ್ಯಕ್ಷ ರಾಜೀವ್, ಮಾಲಾಡಿ ಗ್ರಾಮ‌ ಪಂಚಾಯತ್ ನ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೇಡಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕರಾದ ರಮೇಶ್ ಆರ್, ಧರ್ಮಸ್ಥಳ ಗ್ರಾಮ‌ ಪಂಚಾಯತ್ ನ ಸದಸ್ಯರಾದ ಶ್ರೀಮತಿ ಸುನೀತಾ, ಪತ್ರಕರ್ತೆ ಯೋಗಿನಿ‌ ಮಚ್ಚಿನ, ಇವರುಗಳು ಭಾಗವಹಿಸಿ ಶುಭಹಾರೈಸಿದರು.‌

ಸಭಾ ಕಾರ್ಯಕ್ರಮದ ನಡುವೆ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‌ಬಾಬಿ‌ ಸ್ವಾಗತಿಸಿ, ಕೃಷ್ಣ ಪ್ರಾಸ್ತಾವಿಕವಾಗಿ‌‌ ಮಾತಾಡಿದರು.‌ ಸುಕೇಶ್ ಕೆ ನಿರೂಪಿಸಿ, ಲೋಕೇಶ್ ಧನ್ಯವಾದವಿತ್ತರು..‌

Related posts

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ: ಅನುಗ್ರಹ ಶಾಲಾ ವಾರ್ಷಿಕ ಕ್ರೀಡಾಕೂಟ

Suddi Udaya

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಅಳದಂಗಡಿ: ಆಯಾನ್ಸ್ ಮೊಬೈಲ್ ಮಾಲಕ ಅರಿಹಂತ್ ಜೈನ್ ರವರ ಪತ್ನಿ ಪಲ್ಲವಿ ಜೈನ್ ನಿಧನ

Suddi Udaya

ಎಕ್ಸೆಲ್ ನಿಂದ ಗುರುವಾಯನಕೆರೆ ಸರ್ಕಾರಿ ಶಾಲೆಗೆ ಪೀಠೋಪರಣಗಳ ಖರೀದಿಗೆ ಲಕ್ಷ ಮೊತ್ತದ ಚೆಕ್ ಹಸ್ತಾಂತರ

Suddi Udaya

ಸೌತಡ್ಕ ಗೋಬರ್ ಗ್ಯಾಸ್ ಸ್ಥಾವರ ಕೇಂದ್ರಕ್ಕೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya
error: Content is protected !!