ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಮೇ 31ರಂದು ಸಂಭ್ರಮದ ಶಾಲಾ ಪ್ರಾರಂಭೋತ್ಸವ ಜರಗಿತು.
ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಶಿಕ್ಷಕಿಯರು ಮುಖ್ಯ ದ್ವಾರದಲ್ಲಿ ಆರತಿ ಬೆಳಗಿ, ಕುಂಕುಮವಿಟ್ಟು, ಹೂ ಕೊಟ್ಟು ಸ್ವಾಗತಿಸಿದರು. ಶಾಲೆ ಮತ್ತು ತರಗತಿ ಕೋಣೆಗಳನ್ನು ತಳಿರು-ತೋರಣ ಮತ್ತು ಪೇಪರ್ ಕ್ರಾಫ್ಟ್’ಗಳಿಂದ ಅಲಂಕರಿಸಲಾಗಿತ್ತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಉಜಿರೆಯ ರತ್ನಮಾನಸ ವಿದ್ಯಾರ್ಥಿನಿಲಯದ ನಿಲಯಪಾಲಕ ಯತೀಶ್ ಕುಮಾರ್, ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಕರಾದ ರಂಜಿತ್ ಕುಮಾರ್ ಅತಿಥಿ ಪರಿಚಯ ನೀಡಿದರು, ವಿಶ್ವನಾಥ ಸ್ವಾಗತಿಸಿ, ಜಯಶ್ರೀ ಜೈನ್ ವಂದಿಸಿ, ಮೋನಪ್ಪ ನಿರೂಪಿಸಿದರು.