24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ಪಂಚಾಯತ್‌ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸಂಜೀವ ನಾಯ್ಕರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಪಂಚಾಯತ್‌ರಾಜ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಮೇ 31ರಂದು ವಯೋ ನಿವೃತ್ತರಾದ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕರ ಬೀಳ್ಕೊಡುಗೆ ಸಮಾರಂಭವು ಮೇ 31ರ ಅಪರಾಹ್ನ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈಜಣ್ಣರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈಜಣ್ಣ ಮಾತನಾಡಿ; ಸಂಜೀವ ನಾಯ್ಕರ ನಿವೃತ್ತ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿವರ್ಗದವರು ಹಾಗೂ ತಾಲೂಕು ಪಂಚಾಯತ್‌ನ ಸಿಬ್ಬಂದಿಗಳು ಈ ಸರಳ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ನಾರಾವಿ ಗ್ರಾಮ ಪಂಚಾಯತ್‌ನ ಸುಧಾಕ‌ರ್ ಮಾತನಾಡಿ ಸಂಜೀವ ನಾಯ್ಕರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಛೇರಿಯ ವ್ಯವಸ್ಥಾಪಕ ಪ್ರಶಾಂತ್‌ ಹಾಗೂ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಶೆಟ್ಟಿ ನೊಚ್ಚ ಮಾತನಾಡಿ ಸಂಜೀವ ನಾಯ್ಕರೊಂದಿಗಿನ ವೃತ್ತಿ ಜೀವನದ ಒಡನಾಟವನ್ನು ಮೆಲುಕು ಹಾಕಿದರಲ್ಲದೇ; ನಿವೃತ್ತ ಜೀವನಕ್ಕೆ ಶುಭಕಾಮನೆಗಳನ್ನು ಸಲ್ಲಿಸಿದರು. ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪರವಾಗಿ ನಿವೃತ್ತ ಸಂಜೀವ ನಾಯ್ಕರಿಗೆ ನೆರಿಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸುಮಾ ಶುಭ ಹಾರೈಸಿದರು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕಿ ಸಫಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

ಆರಂಬೋಡಿ ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸ್ವಚ್ಚತೆಯೇ ಸೇವೆ ಕಾರ್ಯಕ್ರಮದಡಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ಕರಾರಸಾನಿಗಮದ ಧರ್ಮಸ್ಥಳ ಘಟಕದ ಹಿರಿಯ ಚಾಲಕ, ಚಿನ್ನದ ಪದಕ ವಿಜೇತ ಹೆಚ್.ಪಿ.ರಾಜುರವರಿಗೆ ಬೀಳ್ಕೋಡುಗೆ

Suddi Udaya

ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಜಿ. ಶೀಲಾವತಿ ಅವರಿಗೆ ಪಿಎಚ್. ಡಿ. ಪದವಿ

Suddi Udaya

ನಡ ಪ್ರೌಢಶಾಲೆಯಲ್ಲಿ ತಾಲೂಕು ಶಿಕ್ಷಕರ ಸಮಾಲೋಚನ ಸಮಾರಂಭ

Suddi Udaya

ಎರಡನೇ ಬಾರಿಗೆ ಕನಾ೯ಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ : ವಿಜಯೋತ್ಸವ

Suddi Udaya

ಗೆಳೆಯರ ಬಳಗ ಗುರುವಾಯನಕೆರೆ: 33ನೇ ವರ್ಷದ ಶ್ರೀ ಶಾರಾದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!