ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ಕರ್ನೋಡಿ ಸ.ಉ.ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

ಲಾಯಿಲ :ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಲಾಯಿಲ ಶಾಲೆಯ ಪ್ರಾರಂಭೋತ್ಸವ ಮೇ 31 ರಂದು ನಡೆಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಗಂಧಿ ಜಗನ್ನಾಥ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಯಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸೌಮ್ಯ ವಹಿಸಿದರು.

ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಗಣೇಶ್. ಆರ್ ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಜಗನ್ನಾಥ್. ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀಮತಿ ಗಂಗಾರಾಣಿ ಜೋಶಿ ಸ್ವಾಗತಿಸಿದರು. ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು ಕೃಷ್ಣಕುಮಾರ್ ವಂದಿಸಿದರು.

ವೇದಿಕೆಯಲ್ಲಿದ್ದ ಗಣ್ಯರು ಉಚಿತ ಸಮವಸ್ತ್ರ , ಪುಸ್ತಕ ವಿತರಿಸಿದರು. ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ಬ್ಯಾಂಡ್ ಸೆಟ್ ನೊಂದಿಗೆ ಗ್ರಾಮ ಪಂಚಾಯತ್ ಬಳಿಯಿಂದ ಮೆರವಣಿಗೆಯ ಮೂಲಕ ಶಿಕ್ಷಕರು ,ಪೋಷಕರು, ವಿದ್ಯಾರ್ಥಿಗಳೊಂದಿಗೆ ಆಗಮಿಸಿದರು. ಪುಟ್ಟ ಮಕ್ಕಳಿಗೆ ಗುಲಾಬಿ ನೀಡುವ ಮೂಲಕ ಶಾಲೆಗೆ ಸ್ವಾಗತಿಸಲಾಯಿತು.

Related posts

ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು

Suddi Udaya

ಚಾರ್ಮಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

Suddi Udaya

ಉಜಿರೆ: ವಿದ್ಯಾನಗರ ನಿವಾಸಿ ಗೀತಾ ಆಚಾರ್ಯ ನಿಧನ

Suddi Udaya

ಕಳೆoಜ: ನಾಟಿ ವೈದ್ಯೆ ಕಮಲ ನಿಧನ

Suddi Udaya

ಶ್ರೀ ಸ್ಟಾರ್ ಯುವಕ ಹಾಗೂ ಮಹಿಳಾ ಮಂಡಲದ ವತಿಯಿಂದ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!