ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಕುಂಬಾರರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬೆಳ್ತಂಗಡಿ ಕುಂಬಾರರ ಸಂಘದ 2025-26ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷರಾದ ಹೆಚ್.ಪದ್ಮ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜು.12 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷರು ಗಣ್ಯರ ಜೊತೆ ಸೇರಿ ದೀಪಪ್ರಜ್ವಲನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಬಿ.ಹೆಚ್ ರಾಜು ಸಂಘದ ವರದಿ ವಾಚಿಸಿದರು. ಕೋಶಾಧಿಕಾರಿ ಸಂಜೀವ ಬಿ.ಹೆಚ್ ಲೆಕ್ಕಪತ್ರ ಮಂಡಿಸಿದರು. ವರದಿ ಹಾಗೂ ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು. ತನಗೆ ಬ್ಯಾಂಕ್ ಸಾಲ ನಿರಾಕರಿಸಿದಾಗ ಸಂಘದ ಅಧ್ಯಕ್ಷರು ಸ್ಪಂದಿಸಿ ಸಾಲ ಕೊಡಿಸಿದರು ಹಾಗೂ ಜಮೀನಿನ ವಿವಾದವನ್ನು ಸಂಘದ ಸದಸ್ಯರು ಒಟ್ಟಾಗಿ ನಿಂತು ಪರಿಹರಿಸಿದ ವಿಚಾರವನ್ನು ಸಭೆಯಲ್ಲಿ ಜಯರಾಮರವರು ಪ್ರಸ್ತಾಪಿಸಿ ಕೃತಜ್ಞತೆ ಸಲ್ಲಿಸಿದರು. ರಮೇಶ್ ಹೆಚ್.ಅವರು ಸಂಘದ ವತಿಯಿಂದ ತಾಲೂಕು ಸಂಘದ ವತಿಯಿಂದ ರಕ್ತದಾನ ಶಿಬಿರ ಮಾಡುವಂತೆ ಹಾಗೂ ಸಂದೀಪ್ ರೆಂಕೆದಗುತ್ತು ಅವರು ಕ್ರೀಡಾಕೂಟ ಮಾಡುವಂತೆ ಸಲಹೆ ನೀಡಿದರು.

ಅಧ್ಯಕ್ಷ ಹೆಚ್. ಪದ್ಮಕುಮಾರ್ ಮಾತನಾಡಿ, ತಾಲೂಕು ಸಂಘದ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯಕ್ರಮ ಆಯೋಜಿಸುವುದಾಗಿ ತಿಳಿಸಿ, ಸಂಘದ ಆರ್ಥಿಕ ಪರಿಸ್ಥಿತಿ ಭದ್ರಪಡಿಸುವಂತೆ ಸದಸ್ಯರಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರತಿ ತಿಂಗಳ ಸಭೆ ನಡೆಸಲು ಉಚಿತವಾಗಿ ಸ್ಥಳವಕಾಶ ನೀಡಿದ ಸಂಜೀವ, ಜಲಜ ದಂಪತಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಮಕ್ಕಳಿಗೆ ಸಂಸ್ಕಾರ, ಸಂಪ್ರದಾಯಗಳನ್ನು ಕಲಿಸಿ, ನೆಮ್ಮದಿಯ ಜೀವನಕ್ಕೆ ಕರೆ ನೀಡಿದರು. ಕು.ದಿಶಾ ಹಾಗೂ ಬಳಗದವರ ಪ್ರಾರ್ಥನೆ ಬಳಿಕ ಸಾಗರ್ ಸ್ವಾಗತಿಸಿದರು. ಆಶಾದಯಾನಂದ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಜಲಜ ವಂದಿಸಿದರು.


ಸಂಘದ ನೂತನ ಅಧ್ಯಕ್ಷರಾಗಿ ಹೆಚ್. ಪದ್ಮಕುಮಾರ್, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ರಾಜು ಬಿ.ಹೆಚ್, ಸಂಘಟನಾ ಕಾರ್ಯದರ್ಶಿ ದಯಾನಂದ, ಕೋಶಾಧಿಕಾರಿ ಭಾಸ್ಕರ ಹೇಬೆಬೈಲು, ಉಪಾಧ್ಯಕ್ಷ ಸಂಜೀವ ಎನ್, ಜಂಟಿ ಕಾರ್ಯದರ್ಶಿ ಸಂದೀಪ್ ರೆಂಕೆದಗುತ್ತು ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.


ಯುವಘಟಕದ ಅಧ್ಯಕ್ಷರಾಗಿ ಪ್ರದೀಪ ಸುದೇಮುಗೇರು, ಉಪಾಧ್ಯಕ್ಷ ಶ್ರೀನಾಥ್ ಸಂಜಯನಗರ, ಕಾರ್ಯಾದರ್ಶಿ ಸಂಪತ್, ಜಂಟಿ ಕಾರ್ಯದರ್ಶಿ ಲೋಕೇಶ್, ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ಹಾಗೂ ಸತೀಶ್‌ರನ್ನು ಆರಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶ್ರೀಮತಿ ಉಷಾ, ಉಪಾಧ್ಯಕ್ಷೆ ಶ್ರೀಮತಿ ಜಲಜ, ಕಾರ್ಯದರ್ಶಿ ಆಶಾ ದಯಾನಂದ, ಜಂಟಿ ಕಾರ್ಯದರ್ಶಿ ಮಲ್ಲಿಕಾ ಕೃಷ್ಣಪ್ಪ, ಸಲಹೆಗಾರರಾಗಿ ಕೆ.ಮುತ್ತಪ್ಪ, ಬಿ.ಜನಾರ್ದನ, ಡಾ.ರಮೇಶ್ ಕಾರಂತ್ಯಾರು, ನಾರಾಯಣ ಕುಲಾಲ್, ಸಂಜೀವ ಬಿ.ಹೆಚ್, ಕಾರ್ಯಕಾರಿಣಿ ಸದಸ್ಯರಾಗಿ ಕುಶಾಲಪ್ಪ, ಹೆಚ್. ರಮೇಶ್ ಗೇರುಕಟ್ಟೆ, ಸಂಜೀವ ಬಿ., ಬೊಮ್ಮಯ್ಯ ಕುಲಾಲ್, ಜಯರಾಮ ರೆಂಕೆದಗುತ್ತು, ಶೇಖರ ಕೆಂಬರ್ಜೆ, ರಮೇಶ ಸುದೇಮುಗೇರು ಆಯ್ಕೆಯಾದರು.

Related posts

ನೀರಿಗೆ ಇಳಿದಿದ್ದ ವೃದ್ದೆಯೋರ್ವರ ಶವ ಬೆಳಾಲು ಗ್ರಾಮದ ಅವೇಕೆ ಎಂಬಲ್ಲಿ ಪತ್ತೆ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ನಿಧಿ ವಿತರಣೆ

Suddi Udaya

ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

Suddi Udaya

ಬ್ರಾಂಡೆಡ್ ಬಟ್ಟೆ ಖರೀದಿಗೆ ಸುವರ್ಣಾವಕಾಶ! ಶೇ.80 ರವರೆಗೆ ಬ್ರಾಂಡೆಡ್ ಬಟ್ಟೆಗಳ ಮೇಲೆ ಭಾರೀ ರಿಯಾಯಿತಿ

Suddi Udaya

ಬೆಳ್ತಂಗಡಿ ಕಿನ್ಯಮ್ಮ ಸಭಾಭವನದ ಉದ್ದಿಮೆ ಪರವಾನಿಗೆ ರದ್ದುಗೊಳಿಸಿದ ಪಟ್ಟಣ ಪಂಚಾಯತ್

Suddi Udaya

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya
error: Content is protected !!