ಉಜಿರೆ: ಎಸ್.ಡಿ.ಎಂ ಮಹಿಳಾ ಐಟಿಐ ಸಂಸ್ಥೆಯಲ್ಲಿ ಮೆಷಿನ್ ಎಂಬ್ರಾಯ್ಡರಿ ತರಬೇತಿ ಕಾರ್ಯಗಾರ

Suddi Udaya

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-24 ನೇ ಸಾಲಿನ ಸೀವಿಂಗ್ ಟೆಕ್ನಾಲಜಿ ವಿದ್ಯಾರ್ಥಿನಿಯರಿಗೆ ‘ಮೆಷಿನ್ ಎಂಬ್ರಾಯ್ಡರಿ’ ಕುರಿತ ಮೂರು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ಜೂ.3ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿ ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ನಾಗೇಶ್ ಶೇಟ್ ಎಂಬ್ರಾಯ್ಡರಿ ಯಂತ್ರದ ಕಾರ್ಯವೈಖರಿ, ಸುಮಾರು 150 ಕ್ಕೂ ಹೆಚ್ಚು ವಿವಿಧ ಎಂಬ್ರಾಯ್ಡರಿ ವಿನ್ಯಾಸಗಳ ಬಗ್ಗೆ ತಿಳಿಸಿದರು. ಹ್ಯಾಂಡ್ ಎಂಬ್ರಾಯ್ಡರಿ ಮತ್ತು ಮೆಷಿನ್ ಎಂಬ್ರಾಯ್ಡರಿ ನಡುವಣ ವ್ಯತ್ಯಾಸ ತಿಳಿಸಿದರು.

ವಿದ್ಯಾರ್ಥಿನಿಯರು ಎಂಬ್ರಾಯ್ಡರಿ ಯಂತ್ರವನ್ನು ಬಳಸುವ ಅನುಭವ ಪಡೆದರು. ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.

Leave a Comment

error: Content is protected !!