ಸಾಮಾಜಿಕ ಮತ್ತು ಆಧ್ಯಾತ್ಮಿಕ ಸೇವೆಗಾಗಿ ಲ| ಬಿ.ಕೆ ವಿಶ್ವನಾಥ ಆರ್. ನಾಯಕ್‌ರಿಗೆ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿ: ಸಾಮಾಜ ಸೇವೆ ಮತ್ತು ಆಧ್ಯಾತ್ಮಿಕ ಸೇವೆಯಲ್ಲಿ ನಿರತರಾಗಿರುವ ಲಯನ್ಸ್ ಡಿಸ್ಟಿಕ್ ಕೋರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿಯ ಲ| ಬಿ.ಕೆ ವಿಶ್ವನಾಥ ಆರ್. ನಾಯಕ್ ಅವರಿಗೆ ಚೆನ್ನೈಯ ಜೀವ ಥಿಯೋಲಾಜಿಕಲ್ ಓಪನ್ ಯೂನಿರ್ವಸಿಟಿ ಡಾಕ್ಟೇರೆಟ್ ಪದವಿ ನೀಡಿ ಗೌರವಿಸಿದೆ.

ಮೇ 25ರಂದು ಚೆನ್ನೈಯ ಅನಿತಾ ಕಾನ್ಪೇರೆನ್ಸ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಯೂನಿರ್ವಸಿಟಿಯ ಚಾನ್ಸಲರ್ ಝಾನ್ಸೀರಾಣಿ ಅವರು ವಿಶ್ವನಾಥ ಆರ್. ನಾಯಕ್ ಅವರಿಗೆ ಪದವಿ ಪ್ರದಾನ ಮಾಡಿದರು. ಡಾ. ವಿಶ್ವನಾಥ ಆರ್.ನಾಯಕ್ ಅವರು ಮಾಡಿರುವ ಸಮಾಜ ಸೇವೆಗಾಗಿ 2022ರಲ್ಲಿ ಅಂತರ್‌ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದರು.

ಲಯನ್ಸ್ ಕ್ಲಬ್ ಬೆಳ್ತಂಗಡಿಯ ಚಾರ್ಟರ್ ಮೆಂಬರ್ ಆಗಿರುವ ಎಂ.ಜೆ.ಎಫ್ ಡಾ. ವಿಶ್ವನಾಥ ಆರ್. ನಾಯಕ್ ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಿಜನಲ್ ಚಾಯರ್‌ಮೆನ್ ಆಗಿ, ಜೋನ್ ಚಾಯರ್‌ಮೆನ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತತ ಡಿಸ್ಟಿಕ್ ಕ್ಯಾಬಿನೆಟ್‌ನಲ್ಲಿ ಕೋ-ಅರ್ಡಿನೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಬೆಳ್ತಂಗಡಿಯಲ್ಲಿ ವಿನಾಯಕ ವುಡ್ ಇಂಡಸ್ಟ್ರೀಸ್‌ನ್ನು ಸ್ಥಾಪಿಸಿ ಹಲವು ವರ್ಷ ನಡೆಸಿಕೊಂಡು ಬಂದಿದ್ದರು. ಶ್ರೀರಾಮ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷರಾಗಿ, ರಾಮಕ್ಷತ್ರೀಯ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಅವಿಭಜಿತ ದ.ಕ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಸದಸ್ಯರಾಗಿ, ಆಶಾ ಯುವಕ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈಶ್ವರಿ ವಿಶ್ವವಿದ್ಯಾನಿಲಕ್ಕೆ ಕಟ್ಟಡ ಕಟ್ಟಿಕೊಡುವಲ್ಲಿಯೂ ಪೂರ್ಣ ಸಹಕಾರ ನೀಡಿದ್ದಾರೆ.

Leave a Comment

error: Content is protected !!