24.8 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸೈಯ್ಯದ್ ಹಬೀಬ್ ವಹಿಸಿಕೊಂಡಿದ್ದರು. ಶಾಲಾ ಮುಖ್ಯಪಾದ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಅಧ್ಯಕ್ಷೀಯ ಮಾತುಗಳನ್ನಾಡಿದ ಜನಾಬ್ ಸೈಯದ್ ಹಬೀಬ್ ” ನಾವು ನಮ್ಮ ಭವಿಷ್ಯದ ಉಳಿವಿಗಾಗಿ ಪರಿಸರವನ್ನು ರಕ್ಷಿಸಬೇಕು. ಗಿಡ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು” ಎಂದರು.

ಶಾಲಾ ವಿದ್ಯಾರ್ಥಿಗಳು ಛದ್ಮ ವೇಷದ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು. ಅತಿಥಿಗಳು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಜೊತೆ ಸೇರಿ ಗಿಡ ನೆಟ್ಟು ಅದಕ್ಕೆ ನೀರುಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ತಾವೇ ತಂದು ಅದನ್ನು ನೆಟ್ಟು ಪೋಷಿಸುವ ಪ್ರತಿಜ್ಞೆಯನ್ನು ಕೈಗೊಂಡರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕಿ ಶ್ರೀಮತಿ ಆಯಿಷಾ ವಂದಿಸಿದರು.

Related posts

ಧಾರ್ಮಿಕ ಶ್ರದ್ಧಾ ಕೇಂದ್ರದ ಮೇಲೆ ನಡೆಯುತ್ತಿರುವ ದಾಳಿ ನಿಲ್ಲಬೇಕು. ಕೂಡಲೇ ಎಸ್ ಐ ಟಿ ಸರ್ಕಾರಕ್ಕೆ ಮದ್ಯಂತರ ವರದಿ ಸಲ್ಲಿಸಲಿ: ರಕ್ಷಿತ್ ಶಿವರಾಂ

Suddi Udaya

ಶಿಶಿಲ : ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya

ಉಜಿರೆ: ಧರ್ಮ ಸಂರಕ್ಷಣಾ ಯಾತ್ರೆಯ ಬಗ್ಗೆ ಸಮಾಲೋಚನೆ ಸಭೆ

Suddi Udaya

ಜಿಲ್ಲಾ ಮಟ್ಟದ ಸೀನಿಯರ್ ವಿಭಾಗದ ರಸಪ್ರಶ್ನೆ ಸ್ಪರ್ಧೆ: ಮೈರೋಳ್ತಡ್ಕ ಶಾಲೆಯ ವಿದ್ಯಾರ್ಥಿ ಧೃತಿ ಎನ್.ಡಿ ಪ್ರಥಮ ಸ್ಥಾನ

Suddi Udaya

ಪಿಯುಸಿ ವಿದ್ಯಾರ್ಥಿ ಸಾನ್ವಿ ಅಸೌಖ್ಯದಿಂದ ನಿಧನ

Suddi Udaya
error: Content is protected !!