November 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಬೆಳ್ತಂಗಡಿವರದಿಸಮಸ್ಯೆ

ಉಪ್ಪಿನನಂಗಡಿ-ಕುಪ್ಪೆಟ್ಟಿ ರಾಜ್ಯ ಹೆದ್ದಾರಿಯ ದುರವಸ್ಥೆಯ ವಿರುದ್ಧ ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ: ರಸ್ತೆ ತಡೆದು ಪ್ರತಿಭಾಟನಕಾರ ಆಕ್ರೋಶ

ಕಲ್ಲೇರಿ: ಗುರುವಾಯನಕೆರೆ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿ-ಉಪ್ಪಿನಂಗಡಿ  ರಾಜ್ಯ ಹೆದ್ದಾರಿಯ ದುರವಸ್ಥೆಯ ವಿರುದ್ಧ ಜನಪ್ರತಿಧಿಗಳು ಹಾಗೂ ಸರಕಾರವನ್ನು ದುರಸ್ತಿಗೆ ಒತ್ತಾಯಿಸಿ ಕುಪ್ಪೆಟ್ಟಿ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನ. 6 ರಂದು ಕಲ್ಲೇರಿ ಜಂಕ್ಷನ್ ಬಳಿ ನಡೆಯಿತು.

ಸಮಿತಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಿಗೌಡ ಪುಷ್ಪಗಿರಿ ಮಾತನಾಡಿ ನಾವು ನಮ್ಮ ಬೇಡಿಕೆಗಳನ್ನು ಕೇಳುತ್ತಿದ್ದೇವೆ. 60 ವರ್ಷದ ಹಿಂದೆ ರಸ್ತೆ ನಿರ್ವಹಣೆಗೆ ಗ್ಯಾಂಗ್ ವರ್ಕ್ಸ್ ರನ್ನು ನೇಮಿಸಲಾಗಿತ್ತು ಇದನ್ನು ಮತ್ತೆ ಪ್ರಾರಂಭಿಸಬೇಕು. ರಸ್ತೆ ನಿರ್ಮಾಣವಾಗಿ ಹೊಂಡ ಬಿದ್ದರೆ ಅದನ್ನು ಸರಿದೂಗಿಸುವ ವ್ಯವಸ್ಥೆ ಜಾರಿಯಾಗುತ್ತಿಲ್ಲ. ಕಲ್ಲೇರಿ ಪೇಟೆ ಬೆಳೆಯುತ್ತಿರುವ ವಾಣಿಜ್ಯ ಕೇಂದ್ರವಾಗಿದೆ ಆದರೆ ಇಲ್ಲಿನ ರಸ್ತೆಯ ಅವ್ಯವಸ್ಥೆ ಶೋಚನೀಯವಾಗಿದೆ ಆದುದರಿಂದ ಜನಪ್ರತಿನಿಧಿನಗಳು ಮತ್ತು ರಾಜ್ಯ ಸರಕಾರ ಗಮನಹರಿಸಿ ರಸ್ತೆ ನಿರ್ಮಿಸಬೇಕು ಎಂದರು.

ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಮಹ್ಮದ್ ಆಲಿ ತುರ್ಕಳಿಕೆ ಮಾತನಾಡಿ ದೈನಂದಿನ ಓಡಾಟಗಾರಿಗೆ, ವಿದ್ಯಾರ್ಥಿಗಳಿಗೆ, ಚಾಲಕರಿಗೆ, ಕಾರ್ಮಿಕರಿಗೆ, ರೋಗಿಗಳಿಗೆ ತೊಂದರೆ ತೀವ್ರವಾದರು  ರಸ್ತೆ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ. 1148 ಗುಂಡಿಗಳನ್ನು ಈ ರಸ್ತೆ ಒಳಗೊಂಡಿದೆ ಆದರೆ ದುರಸ್ಥಿ ನಡೆಸಲಾಗುತ್ತಿಲ್ಲ, ನಾಗರೀಕರ ತಾಳ್ಮೆಯನ್ನು ಪರಿಕ್ಷೀಸಲಾಗುತ್ತಿದೆ. ತೇಪೆ ಹಚ್ಚುವ ಬದಲು ಹೊಸ ರಸ್ತೆಯನ್ನು ಶೀಘ್ರವೇ ಮಾಡಬೇಕು, ನ. 16 ರಕ್ಕಿಂತ ಮೊದಲು ಕಾಮಗಾರಿ ಪ್ರಾರಂಭಗೊಳ್ಳಬೇಕು ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆಯ ಕರೆಗಂಟೆ ನೀಡಿದರು.

ಭರವಸೆ ಬೇಡ ರಸ್ತೆ ಬೇಕು ನ್ಯಾಯ ಬೇಕು, ಸರಕಾರದ ವಿರುದ್ಧ ಪ್ರತಿಭಟನಕಾರರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ವಾಹನ ಸವಾರರಾಗಿ ಕೆಲ ಕಾಲ ತೊಂದರೆ ಉಂಟಾಯಿತು. ಉಪ್ಪಿನಂಗಡಿ ಪೊಲೀಸ್ ಠಾಣೆ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು.

ಕುಪ್ಪೆಟ್ಟಿ ರಿಕ್ಷಾ ಚಾಲಕ ಮಾಲಕರ ಸಂಗದ ಅಧ್ಯಕ್ಷ ಚಿದನಾಂದ ನಾಯ್ಕ, ಕಲ್ಲೇರಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹಮ್ಮದ್ ಫಾರೂಕ್, ಉಪಾಧ್ಯಕ್ಷ ಗಣೇಶ್, ಜೊತೆ ಕಾರ್ಯದರ್ಶಿ ಕೆ. ಎಂ. ರಝಾಕ್, ಪ್ರಧಾನ ಕಾರ್ಯದರ್ಶಿ ಎನ್‌.ಎಂ ಶರೀಫ್ ಸಖಾಫಿ ನೆಕ್ಕಿಲ್, ಕೋಶಾಧಿಕಾರಿ ಬಿ ಎಂ ಉಸ್ಮಾನ್ ಹಾಜಿ ಅಳಕೆ, ಉಪಾಧ್ಯಕ್ಷ ಅಬ್ದುರಹ್ಮಾನ್ ಬಂಡಸಾಲೆ, ಬಸ್ ನೌಕರರ ಸಂಘದ ಉಪಾಧ್ಯಕ್ಷ ಪ್ರಸಾದ್‌, ಮಹಮ್ಮದ್ ಗೋವಿಂದೂರು, ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಎನ್‌.ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.

Related posts

ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ರೂ. 50 ಲಕ್ಷ ನಗದಿನೊಂದಿಗೆ ಕಾರಿನಲ್ಲಿ ಹೋಗಿದ್ದ ಮೂವರು: ನಕಲಿ ಚಿನ್ನದ ಆಸೆಗೆ ಮೂವರ ಬಲಿಯಾಯಿತೆ ಎಂಬ ಶಂಕೆ: ಸಮಗ್ರ ತನಿಖೆ ಬಳಿಕವಷ್ಟೇ ದೊರೆಯಲಿದೆ ಸ್ವಷ್ಟ ಮಾಹಿತಿ

Suddi Udaya

ಫೆ.8: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ “ವಾಕ್-ಇನ್ ವಿದ್ವತ್”-ಎ ಸ್ಟೆಪ್ ಇಂಟು ಸಕ್ಸಸ್” :ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ

Suddi Udaya

ರಾಷ್ಟ್ರೀಯ ಹೆದ್ದಾರಿ ಅರಳಿ ಪ್ರದೇಶಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಆಗ್ರಹ

Suddi Udaya

ಕಳಿಯ ಬೊಳ್ಳುಕಲ್ಲು ಹನುಮಾನ್ ನಗರ ಶ್ರೀ ದುರ್ಗಾ ಭಜನಾ ಮಂಡಳಿ ವಾರ್ಷಿಕ ಲೆಕ್ಕ ಪತ್ರ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಔಷಧಿಕಾರರ ದಿನಾಚರಣೆ

Suddi Udaya

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾಗಿ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು ಆಯ್ಕೆ

Suddi Udaya
error: Content is protected !!