ಮಾಲಾಡಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಮೆಕ್ಯಾನಿಕ್ ಇಲೆಕ್ಟ್ರಿಕ್ ವೆಹಿಕಲ್ ವಿಭಾಗದ 2024-26ನೇ ಸಾಲಿನ ತರಬೇತಿದಾರ ಆದರ್ಶ್ ಇವರು Karnataka Skill Olympics 2025-26ರ Heavy Vehicle Technology ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿರುತ್ತಾರೆ.
ಇವರು ಓಡಿಲ್ನಾಳ ಗ್ರಾಮದ ಹೊಸಮನೆ ನಿವಾಸಿ ಕೃಷ್ಣ ಮತ್ತು ಪದ್ಮಾವತಿ ದಂಪತಿ ಪುತ್ರ. ಇವರಿಗೆ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.















