ಬೆಳ್ತಂಗಡಿ: ಚಿನ್ನಾಭರಣ ಮಾರಾಟ ವ್ಯವಹಾರ ವಿಸ್ವಾಸಾರ್ಹ ವ್ಯವಹಾರಗಳಲ್ಲಿ ಒಂದಾದುದು. ಇಲ್ಲಿ ಜಾತಿ ಧರ್ಮದ ವ್ಯತ್ಯಾಸವಿಲ್ಲದೆ ವ್ಯಾಪಾರ ಧರ್ಮ ಪಾಲಿಸಬೇಕಾದುದು ಬಹುಮುಖ್ಯವಾದ ವಿಚಾರ ಎಂದು ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ ಹೇಳಿದರು.
ಗುರುವಾಯನಕೆರೆ ಫನಾತೀರ್ ಮಾಲ್ ಸಂಕೀರ್ಣದಲ್ಲಿ ಜೂ.6 ರಂದು ಆರಂಭಗೊಂಡ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮಳಿಗೆ “ಕಿಂಗ್ ಡಂ ಗೋಲ್ಡ್ ಏಂಡ್ ಡೈಮಂಡ್ ಜ್ಯುವೆಲ್ಸ್” ಇದರ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಮಳಿಗೆಯ ಮಾಲಕ ಮುಹಮ್ಮದ್ ಮುನೀರ್ ವಹಿಸಿಕೊಂಡಿದ್ದರು.
ಪ್ರಧಾನ ಅತಿಥಿಯಾಗಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ರೆ.ಫಾ. ಕ್ಲಿಫರ್ಡ್ ಪಿಂಟೋ ಮಾತನಾಡಿ, ದೇವರು ಈ ಜಗತ್ತಿನಲ್ಲಿ ಜೀವ ಜಾಲಗಳನ್ನು ಸೃಷ್ಟಿಸಿದನೇ ಹೊರತು ಕಟ್ಟಡಗಳನ್ನು ಕಟ್ಟಿಲ್ಲ. ಜೀವಿಗಳ ಪೈಕಿ ಮನುಷ್ಯನಿಗೆ ವಿಶೇಷ ಬುದ್ದಿವಂತಿಕೆ ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿಕೊಂಡು ಅವನು ಕಟ್ಟಡ, ವ್ಯವಹಾರ, ಉದ್ದಿಮೆ ಕಟ್ಟಿಕೊಂಡಿದ್ದಾನೆ. ಗುರುವಾಯನಕೆರೆ ಪೇಟೆಗೆ ಅತೀ ಆವಶ್ಯಕವಾಗಿದ್ದ ಈ ಚಿನ್ನೋದ್ಯಮ ಇಲ್ಲಿನ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಮುಖ್ಯ ಅತಿಥಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ ಕುಮಾರ್ ಜೈನ್ ಮಾತನಾಡಿ, ಗುರುವಾಯನಕೆರೆ ಶಿಕ್ಷಣ, ವ್ಯವಹಾರ, ಪ್ರವಾಸೋದ್ಯಮ ನೆಲೆಯಲ್ಲಿ ಶೀಘ್ರವಾಗಿ ಬೆಳೆಯುತ್ತಿದೆ. ಅದಕ್ಕೆ ಈ ಕಿಂಗ್‌ಡಂ ಗೋಲ್ಡ್ ಏಂಡ್ ಡೈಮಂಡ್ಸ್ ಮಳಿಗೆ ಹೊಸ ಸೇರ್ಪಡೆಯಾದಂತಾಗಿದೆ. ಸಂಸ್ಥೆಗಳಿಂದ ಊರು ಪ್ರಚಾರಕ್ಕೆ ಬಂದರೆ ಪ್ರಾಮಾಣಿಕ ವ್ಯವಹಾರದಿಂದ ಸಂಸ್ಥೆಗಳೂ ಉನ್ನತ ಸ್ಥರಕ್ಕೆ ಬೆಳೆಯುವ ಅವಕಾಶವಿದೆ ಎಂದರು.
ಗುರುವಾಯನಕೆರೆಯ ಖ್ಯಾತ ಉದ್ಯಮಿ ರಾಜೇಶ್ ಶೆಟ್ಟಿ ‘ನವ ಶಕ್ತಿ’, ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ವಿಶೇಷ ಅಭ್ಯಾಗತರಾಗಿದ್ದು ಶುಭ ಕೋರಿದರು. ಸನ್ಮಾನಿತ ಡಾ. ವೇಣುಗೋಪಾಲ ಶರ್ಮ ಮತ್ತು ಹಿರಿಯ ನೋಟರಿ ವಕೀಲರು ಹಾಗೂ ಬಲಿಪ ರೆಸಾರ್ಟ್ ಮಾಲಿಕ ಮುರಳಿ ಬಲಿಪ ಸಂದರ್ಭೋಚಿತವಾಗಿ ಶುಭ ಕೋರಿದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ವೈದ್ಯ ಡಾ. ವೇಣುಗೋಪಾಲ ಶರ್ಮ, ಹಿರಿಯ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗುರುವಾಯನಕೆರೆ, ಮಾಜಿ ಸೈನಿಕ ಮುಹಮ್ಮದ್ ರಫಿ ಬೆಳ್ತಂಗಡಿ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಚೇರ್ಮೆನ್ ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು.
ಅಹಮದ್‌ಕುಂಞಿ ಚಾರ್ಮಾಡಿ ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಬಾತಿಷಾ ತಂಙಳ್ ಕಿನ್ಯ, ಆಸುಪಾಸಿನ ಮಸ್ಜಿದ್ ಗಳ ಅಧ್ಯಕ್ಷರುಗಳಾದ ಬಿ.ಎ ನಝೀರ್ ಬೆಳ್ತಂಗಡಿ, ಅಬೂಬಕ್ಕರ್ ಹಾಜಿ ಪೆಲತ್ತಳಿಕೆ ಪರಪ್ಪು, ಅಬ್ದುಲ್ ಹಕೀಂ ಸುನ್ನತ್‌ಕೆರೆ, ಹಾಜಿ ಉಸ್ಮಾನ್ ಶಾಫಿ ಗುರುವಾಯನಕೆರೆ, ಕಾಜೂರು ಆಡಳಿತ ಮಂಡಳಿ ಪ್ರ.ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ಫ್ ಸದಸ್ಯ ಜೆ.ಹೆಚ್ ಅಬೂಬಕ್ಜರ್ ಸಿದ್ದೀಕ್ ಕಾಜೂರು, ಫನಾತೀರ್ ಮಾಲ್ ಕಟ್ಟಡದ ಮಾಲಿಕ ರಶೀದ್ ಹಾಗೂ ಅಬ್ಬಾಸ್ ಹಾಜಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಇಮ್ತಿಯಾಝ್, ಪಿ.ಕೆ ಕುಟುಂಬದ ಹಿರಿಯ ಮುತ್ಸದ್ದಿ ಪಿ.ಕೆ ಆಲಿಯಬ್ಬ, ಹಿರಿಯ ಸಿವಿಲ್ ಗುತ್ತಿಗೆದಾರ ಅಬ್ದುಲ್ ರಹಿಮಾನ್ ಹಾಜಿ ಗುರುವಾಯನಕೆರೆ, ಸುಪ್ರಿಂ ಸೋಫಾ ಮಾರ್ಟ್, ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆ ಮಾಲಕ ಝುಬೈರ್ ಗುರುವಾಯನಕೆರೆ, ಖ್ಯಾತ ಉದ್ಯಮಿ ಇಸ್ಮಾಯಿಲ್ ವಳಚ್ಚಿಲ್, ಗ್ರಾ.ಪಂ ಸದಸ್ಯ ಮುಸ್ತಫಾ ಗುರುವಾಯನಕೆರೆ, ಉದ್ಯಮಿ ಮಜೀದ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಿಕ, ವಿದೇಶದ ಅಬೂದಾಬಿಯಲ್ಲಿ ಐಫೋನ್ ವಿತರಕರಾಗಿರುವ ಮುಹಮ್ಮದ್ ಮುನೀರ್ ಮತ್ತು ಸಹೋದರ , ಬೆಳ್ತಂಗಡಿ ಚರ್ಚ್ ಕ್ರಾಸ್ ಬಳಿ ಟಯರ್ ಕೇರ್ ಸಂಸ್ಥೆ ನಡೆಸುತ್ತಿರುವ ಅಪ್ಸರ್ ಅವರು ಎಲ್ಲಾ ಆಹ್ವಾನಿತರನ್ನು ಬರಮಾಡಿಕೊಂಡು ಪುರಸ್ಕರಿಸಿದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಲೋಕೋಪಯೋಗಿ ಗುತ್ತಿಗೆದಾರ ಸಲೀಂ ಗುರುವಾಯನಕೆರೆ ಸ್ವಾಗತಿಸಿದರು. ಉಮರ್ ಜಿ.ಕೆ ಮತ್ತು ಅಯೂಬ್ ಗುರುವಾಯನಕೆರೆ ಸಹಕರಿಸಿದರು.
ಉದ್ಘಾಟನೆಯ ಪ್ರಯುಕ್ತ ಆಫರ್;
ಉದ್ಘಾಟನೆಯ ಪ್ರಯುಕ್ತ 10,000 ಕ್ಕಿಂತ ಹೆಚ್ಚು ಶಾಪಿಂಗ್ ಮಾಡಿ ಕೂಪನ್ ಪಡೆಯುವ ಮೂಲಕ ಅದೃಷ್ಟ ಚೀಟಿಯಲ್ಲಿ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.
ವಿಜೇತರಿಗೆ ಪ್ರಥಮ ಬಹುಮಾನ ಸ್ಕೂಟರ್, ದ್ವಿತೀಯ ಬಹುಮಾನ ಏರ್ ಕಂಡಿಷನರ್, ತೃತೀಯ ಬಹುಮಾನ ರೆಫ್ರಿಜರೇಟರ್, ಚತುರ್ಥ ಬಹುಮಾನ: ವಾಷಿಂಗ್ ಮೆಷಿನ್ ಹಾಗೂ 5 ನೇ ಬಹುಮಾನ ಗ್ರೈಂಡರ್ ಮತ್ತು ಟೇಬಲ್ ಫ್ಯಾನ್ ಗೆಲ್ಲುವ ಅವಕಾಶ ಘೋಷಿಸಲಾಗಿದೆ.