24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡದಿಂದ ಪಿಲಿಗೂಡು ಸ.ಹಿ.ಪ್ರಾ.ಶಾಲೆಗೆ ಮಿಕ್ಸಿ, ಗ್ಯಾಸ್ ಸಿಲಿಂಡ‌ರ್ ಹಸ್ತಾಂತರ

ಬೆಳ್ತಂಗಡಿ : ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲಕರು ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ (ರಿ) ಉಜಿರೆಯ ಸಂಚಾಲಕರಾದ ಮೋಹನ್ ಕುಮಾ‌ರ್ ಅವರು ಜೂ 7 ರಂದು ಪಿಲಿಗೂಡು ಸ.ಹಿ.ಪ್ರಾ.ಶಾಲೆಗೆ ಮಿಕ್ಸಿ, ಹಾಗೂ ಗ್ಯಾಸ್‌ ಸಿಲಿಂಡರನ್ನು ಶಾಲೆಗೆ ಹಸ್ತಾಂತರ ಮಾಡಿದರು.


ಕಾರ್ಯಕ್ರಮದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ (ರಿ) ಸಂಚಾಲಕರಾದ ಮೋಹನ್ ಕುಮಾ‌ರ್, ಪತ್ರಕರ್ತರಾದ ಪ್ರಸಾದ್‌ ಶೆಟ್ಟಿ ಏಣಿಂಜೆ, ಪಿಲಿಗೂಡು ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಪ್ಲೇವಿಯಾ ಡಿ’ಸೋಜಾ, ಶಿಕ್ಷಕಿಯರಾದ ಚಂದ್ರಾ.ಕೆ, ಶಿಲ್ಪಾ, ಉಷಾ, ಎಸ್‌.ಡಿ.ಎಮ್.ಸಿ ಅಧ್ಯಕ್ಷ ಇಸ್ಮಾಯಿಲ್, ಹಳೆ ವಿದ್ಯಾ ರ್ಥಿ ಸಂಘದ ಅಧ್ಯಕ್ಷ ಭುವನೇಶ್, ಎಸ್.ಡಿ.ಎಮ್.ಸಿ ಸದಸ್ಯರ ಬಾಲಕೃಷ್ಣ, ವನಿತಾ, ಪೋಷಕರು ಭಾಗವಹಿಸಿದರು.


ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಗೂಡಿನಿಂದ ಜೂ. 5ರ ರಾತ್ರಿ ಮಿಕ್ಸಿ, ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಇನ್ನಿತರ ವಸ್ತುಗಳು ಕಳವಾಗಿದ್ದು ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಾಧ್ಯವಾಗದೆ ಸಮಸ್ಯೆಯಾಗಿತ್ತು.


ಶಾಲೆಯಲ್ಲಿ ಕಳ್ಳತನವಾದ ವರದಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ವರದಿಯನ್ನು ವೀಕ್ಷಿಸಿದ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ತಂಡದ ಸಂಚಾಲಕರಾದ ಮೋಹನ್ ಕುಮಾ‌ರ್ ಅವರು ಮಕ್ಕಳ ಕಷ್ಟವನ್ನು ಅರಿತು ಶಾಲೆಗೆ ಹೊಸದಾಗಿ ಗ್ಯಾಸ್ ಸಿಲಿಂಡ‌ರ್ ಮತ್ತು ಮಿಕ್ಸಿಯನ್ನು ನೀಡಿ ಮಾನವಿಯತೆಯನ್ನು ಮೆರೆದಿದ್ದಾರೆ.

Related posts

ಸೂಳಬೆಟ್ಟು ಸ.ಕಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿ ಮೋಕ್ಷಿತ್ ಎಸ್ ಬಂಗೇರ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಆಮಂತ್ರಣ ರಾಜ್ಯ ಸಮಿತಿಗೆ ಸದಸ್ಯರಾಗಿ ಹೆಚ್.ಕೆ ನಯನಾಡು ಆಯ್ಕೆ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಎ.25-26: ಸಂತಾನ ಪ್ರದಾ ನಾಗಕ್ಷೇತ್ರ ಕಟ್ಟದಬೈಲು ಪ್ರತಿಷ್ಠಾಪನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!