April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಧರ್ಮಸ್ಥಳ: “ಮಂಜೂಷಾ” ವಸ್ತುಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ ಜೈಬಾಲಾಜಿ” ಹಾಯಿದೋಣಿ

ಉಜಿರೆ: ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ “ಜೈಬಾಲಾಜಿ” ಹಾಯಿದೋಣಿಯನ್ನು ಜೂ10ರಂದು ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಅರ್ಪಿಸಲಾಯಿತು.
ಕುಂದಾಪುರದ ಖಾರ್ವಿಕೇರಿಯ ಜೈಬಾಲಾಜಿ ಎಂಟರ್‌ಪ್ರೆöÊಸಸ್ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು “ಮಂಜೂಷಾ” ವಸ್ತುಸಂಗ್ರಹಾಲಯಕ್ಕೆ ಸಮರ್ಪಿಸಿದರು.


ಸವಿವರ ಮಾಹಿತಿ: 51 ಅಡಿ ಉದ್ದ ಹಾಗೂ 10 1/2   ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದಕ್ಕೆ 22 ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. 20 ವರ್ಷಗಳ ಹಿಂದೆ ಇಂತಹ ಹತ್ತು ದೊಣಿಗಳಿದ್ದವು. ಚಿಪ್ಪು, ಮರ, ಹಂಚು ಸಾಗಾಟಕ್ಕೂ ಅವುಗಳು ಬಳಕೆಯಾಗುತ್ತಿದ್ದವು. ಚಿಪ್ಪು ಸದ್ಯ ನಶಿಸುತ್ತಾ ಬಂದಿರುವುದರಿAದ ಮುಂದಿನ ಪೀಳಿಗೆಗೆ ಕೊಂಕಣಿ ಖಾರ್ವಿಸಮಾಜದ ಜನಜೀವನ ಹಾಗೂ ಹಾಯಿದೋಣಿ ಬಗ್ಯೆ ಪರಿಚಯ ಮಾಡಿಕೊಳ್ಳಲು ಹಾಯಿ ದೋಣಿ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಪೂಜ್ಯ ಶ್ರೀ ಹೆಗ್ಗಡೆಯವರ ಅನುಮತಿ ಮತ್ತು ಆಶೀರ್ವಾದಗಳೊಂದಿಗೆ ಇದನ್ನು “ಮಂಜೂಷಾ”ಕ್ಕೆ ಸಮರ್ಪಿಸಲಾಗಿದೆ ಎಂದು ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ.


ಕೊಂಕಣಿ ಖಾರ್ವಿಸಮಾಜದ ಸುಭಾಷ್ ಖಾರ್ವಿ, ಸುನಿಲ್ ಖಾರ್ವಿ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಮಾಲಾಡಿ : ಗ್ರಾಮ ಪಂಚಾಯತಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 6ನೇ ಆರೋಪಿ ಮಹಮ್ಮದ್ ಶರೀಫ್ ನ್ನು ಬಂಧಿಸಿದ ಎನ್.ಐ.ಎ ಅಧಿಕಾರಿಗಳ ತಂಡ

Suddi Udaya

ಕಳೆಂಜ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಸೋರುತಿದ್ದ ಮನೆಯ ಮೇಲ್ಛಾವಣಿಗೆ ಟಾರ್ಪಲ್ ಅಳವಡಿಕೆ

Suddi Udaya

ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಸಚಿವರಿಂದ ಸಭೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ:ಮಹಿಳಾ ವೃಂದದ ನೂತನ ಕಟ್ಟಡ ಉದ್ಘಾಟನೆ

Suddi Udaya
error: Content is protected !!