29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಶ್ರೀ.ಧ.ಮಂ ವಸತಿ ಪ.ಪೂ. ಕಾಲೇಜಿನಲ್ಲಿ ‘ವ್ಯಕ್ತಿತ್ವ ವಿಕಸನ ಕಾರ್ಯಾಗಾರ’

ಉಜಿರೆ: ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣ ಜೊತೆಗೆ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬೆಳೆಸಿಕೊಂಡು ಕ್ರಿಯಾಶೀಲತೆಯಿಂದ ಮುನ್ನಡೆದರೆ ಅವಕಾಶಗಳು ನಮ್ಮನ್ನು ಅರಸಿ ಬರುವುದು, ಹಾಗಾಗಿ ಕಲಿಕೆಯ ಜೊತೆಗೆ ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ ವಿಷಯಗಳ ಜ್ಞಾನ ಹಾಗೂ ತರಬೇತಿ ಪಡೆದುಕೊಳ್ಳಬೇಕು.


ಪದವಿಪೂರ್ವ ಹಂತದಲ್ಲಿ ನಮ್ಮ ಭವಿಷ್ಯದ ನಿರ್ಧಾರಗಳು ಬಹುತೇಕ ಖಚಿತಗೊಂಡರೆ ಗುರಿಯತ್ತ ಸಾಗಲು ಅದು ಪ್ರೇರೇಪಿಸುವುದು ಎಂದರು.


ಶ್ರೀ. ಧ.ಮಂ ವಸತಿ ಪ.ಪೂ. ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಟ, ಉದಾಹರಣೆಗಳ ಮೂಲಕ ‘ವ್ಯಕ್ತಿತ್ವ ವಿಕಸನ ‘ ಕಾರ್ಯಾಗಾರವನ್ನು ಎಸ್.ಡಿ.ಎಂ ಪದವಿ ಕಾಲೇಜಿನ ಮನಶಾಸ್ತ್ರದ ಪ್ರಾಧ್ಯಾಪಕರಾದ ಸುಧೀರ್ ಕೆ.ವಿ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಕೆ.ಎಸ್. ಉಪಸ್ಥಿತರಿದ್ದರು.
ಗಣಕಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ವಂದಿಸಿ, ನಿರೂಪಿಸಿದರು.

Related posts

ಭಾರತೀಯ ಜನತಾ ಪಾಟಿ೯ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ – ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಆರಂಭ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಅಮೂಲ್ಯ ವಜ್ರಗಳ ಹಬ್ಬಕ್ಕೆ ಚಾಲನೆ: ಗ್ರಾಹಕರ ಕೈಗೆಟಕುವ ರೀತಿಯಲ್ಲಿ ‘ಡೈಮಂಡ್ ಫೆಸ್ಟ್’

Suddi Udaya

ನಾಲ್ಕೂರು: ರಾಮನಗರ ಬಾಕ್ಯರಡ್ಡ ನಿವಾಸಿ ಡೀಕಮ್ಮ ನಿಧನ

Suddi Udaya

ಮೇ 24: ವೇಣೂರು ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ: ವಿವಿಧ ಸೇತುವೆ ರಚನೆ ಕಾಮಗಾರಿಗಳಿಗೆ ರೂ. 6 ಕೋಟಿ 25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು: ರಕ್ಷಿತ್ ಶಿವರಾಮ್

Suddi Udaya

ಧರ್ಮಸ್ಥಳ: ಕಟ್ಟದಬೈಲು ಅಂಗನವಾಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!