38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಲಯನ್ಸ್ ಕ್ಲಬ್‌ನಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಲಯನ್ಸ್ ಕ್ಲಬ್ ನಿಂದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಜೂ.9 ರಂದು ಭೇಟಿ ಮಾಡಿ 50 ಸಂವತ್ಸರಗಳನ್ನು ಪೂರೈಸಿದ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸಾರ್ಥಕ ಸೇವೆಯ ಸವಿನೆನಪಿಗಾಗಿ ಜೂ.23ರಂದು ನಡೆಯಲಿರುವ ” ಸುವರ್ಣ ಸಂಭ್ರಮ” ದಿನಾಚರಣೆಗೆ ಆಹ್ವಾನ ನೀಡಿ ನಂತರ ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸಭಾಂಗಣಕ್ಕೆ ದೇಣಿಗೆಗಾಗಿ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಜು.13ರಂದು ನಡೆಯಲಿರುವ 2024-25ನೇ ಸಾಲಿನ ನೂತನ ಸಾರಥಿ ಲಯನ್ ದೇವದಾಸ್ ಶೆಟ್ಟಿ ಮತ್ತು ತಂಡದ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಂತರ ಹೆಗ್ಗಡೆಯವರು ಲಯನ್ಸ್ ಭವನದ ಉದ್ಘಾಟನೆಗೆ ಬರುವ ಭರವಸೆ ಮತ್ತು ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಅನಂತ ಕೃಷ್ಣ, ಕೋಶಾಧಿಕಾರಿ ದತ್ತಾತ್ರೇಯ ಗೊಲ್ಲ, ಸ್ಥಾಪಕ ಅಧ್ಯಕ್ಷ ಎಂ.ಜಿ ಶೆಟ್ಟಿ, ವಿ.ಆರ್ ನಾಯಕ್, ಮಾಜಿ ಅಧ್ಯಕ್ಷ ವಸಂತ್ ಶೆಟ್ಟಿ, ಧರಣೇಂದ್ರ ಜೈನ್, ರವೀಂದ್ರ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ನಾವರ, ಜಯರಾಮ್ ಭಂಡಾರಿ, ಹೇಮಂತ್ ರಾವ್, ಜಯಂತ ಶೆಟ್ಟಿ, ರಾಜು ಶೆಟ್ಟಿ, ದೇವಿಪ್ರಸಾದ್ ಬೋಲ್ಮ, ನಿಯೋಜಿತ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಕೃಷ್ಣಾಚಾರ್, ನ್ಯಾಣಪ್ಪ, ಲಿವೋ ಕಾರ್ಯದರ್ಶಿ ನಿರೀಕ್ಷಾ ಉಪಸ್ಥಿತರಿದ್ದರು.

Related posts

ಎಸ್.ಎಸ್.ಎಲ್.ಸಿ ಮರು ಮೌಲ್ಯ ಮಾಪನ: ಲಾಯಿಲ ವಿದ್ಯಾರ್ಥಿನಿ ತನ್ವಿ ಭಟ್ ಎಂ ಅವರಿಗೆ 624 ಅಂಕ, ರಾಜ್ಯಕ್ಕೆ 2 ನೇ ಸ್ಥಾನ, ಬೆಳ್ತಂಗಡಿ ತಾಲೂಕಿಗೆ ಪ್ರಥಮ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯದ ಆಶ್ರಯದಲ್ಲಿ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟ

Suddi Udaya

ಉಜಿರೆ ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಉದ್ಯಮಶೀಲತೆ ಕಾರ್ಯಾಗಾರ

Suddi Udaya

ಸುಲ್ಕೇರಿ ಶ್ರೀರಾಮ‌ ಶಾಲೆಯಲ್ಲಿ ಔಷಧಿ ಸಸ್ಯಗಳ ಗಿಡನೇಡುವ ಕಾರ್ಯಕ್ರಮ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾ ಸ್ವೀಕಾರ

Suddi Udaya
error: Content is protected !!