September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸರಳಿಕಟ್ಟೆ ಪ್ರೌಢಶಾಲೆಯಲ್ಲಿ ಯುವ ಸಂಸತ್ತು ಚುನಾವಣೆ


ಬಾರ್ಯ: ಸರಳಿಕಟ್ಟೆಯ ಸರಕಾರಿ ಪ್ರೌಢಶಾಲೆಯಲ್ಲಿ 2024-25ನೇ ಸಾಲಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಯುವ ಸಂಸತ್ತಿಗೆ ಶಾಲಾ ನಾಯಕ ಹಾಗೂ ಶಾಲಾ ಉಪನಾಯಕನ ಆಯ್ಕೆ ನಡೆಸಲಾಯಿತು. ಮೊಬೈಲ್ ಇ.ವಿ.ಎಂ. ಆಪ್ ಬಳಸಿ ಮತ ಚಲಾಯಿಸುವ ವಿಧಾನದ ಬಗ್ಗೆ ವಿವರಿಸಿ ನಂತರ ವಿದ್ಯಾರ್ಥಿಗಳಿಗೆ ಮತದಾನದ ಅವಕಾಶ ನೀಡಲಾಯಿತು.


ಶಾಲಾ ನಾಯಕನಾಗಿ 10ನೇ ತರಗತಿಯ ಇಸ್ಮಾಯಿಲ್ ರಂಶಿದ್, ಉಪನಾಯಕನಾಗಿ 9ನೇ ತರಗತಿಯ ಮುಹಮ್ಮದ್ ಅಶ್ವರ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ 10ನೇ ತರಗತಿಯ ಮಹಮ್ಮದ್ ಅಜ್ಮಲ್ ವಿರೋಧ ಪಕ್ಷದ ಉಪನಾಯಕಿಯಾಗಿ 9ನೇ ತರಗತಿಯ ಫಾತಿಮತ್ ಅಫ್ರ ಆಯ್ಕೆಯಾದರು.

ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕರಾದ ವಿಜಯಶ್ರೀ ಯವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯರಾದ ಹರಿಕಿರಣ್ ಕೆ ಇವರ ಮಾರ್ಗದರ್ಶನದಲ್ಲಿ ಸಹಶಿಕ್ಷಕರಾದ ಮಹಮ್ಮದ್ ಹನೀಫ್, ನಳಿನಾಕ್ಷಿ, ವಿಜಯಶ್ರೀ, ಸಪ್ನಾರಾವ್, ಶಾಂತಾ, ಗಂಗವ್ವ, ರಾಜೇಸಾಬ್ ಹೊಸಕೇರಿ ಹಾಗೂ ತಾರಾ ಚುನಾವಣಾ ಪ್ರಕ್ರಿಯೆ ನಡೆಸಲು ಸಹಕರಿಸಿದರು.

Related posts

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಂಗಳೂರು ಸಂಸದ ಬ್ರಿಜೇಶ್ ಚೌಟ ರವರ ಮನವಿಯನ್ನು ಪರಿಗಣಿಸಿ ದೆಹಲಿಯಲ್ಲಿ JBF ಪೆಟ್ರೋಕೆಮಿಕಲ್ಸ್‌ ಮತ್ತು GAIL ನ ವಿಲೀನದ ಸಮಸ್ಯೆಗಳ ಕುರಿತು ಚರ್ಚೆ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಅಜಿತ್ ಕುಮಾರ್, ಉಪಾಧ್ಯಕ್ಷರಾಗಿ ಜಯಂತ ಶೆಟ್ಟಿ ಆಯ್ಕೆ

Suddi Udaya

ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾಜಿ ಶಾಸಕ ಪ್ರಭಾಕರ್ ಮನೆಗೆ ಭೇಟಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಸಾಮರ್ಥ್ಯ ವರ್ಧನಾ ತರಬೇತಿ

Suddi Udaya
error: Content is protected !!