22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾರಾವಿ ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆತಂಕದ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಂತ್ರ ಶ್ರೀ ಯೋಜನೆ ಮೂಲಕ ರೈತರ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಶ್ರೀ ಕ್ಷೇ ಧ ಗ್ರಾ ಯೋ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ತಿಳಿಸಿದ್ದಾರೆ.

ಪ್ರಶಾಂತ್ ರವರ ಕೇಂದ್ರೀಕ್ರತ ನರ್ಸರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ರೈತರಿಗೆ ಅನುಕೂಲವಾಗುವ ಸಸಿ ಮಡಿ ತಯಾರಿಸಿ ನೀಡುತ್ತಿದ್ದಾರೆ. ಪ್ರಥಮದಲ್ಲಿ ಬಿತ್ತನೆಗೆ ಯೋಗ್ಯವಾದ ಭತ್ತದ ಬೀಜದ ಆಯ್ಕೆ ಮಾಡುವುದು ಬೀಜೋಪಚಾರ ಮಾಡಿದ ಭತ್ತದ ಬೀಜ ಒಂದು ಎಕ್ರೆಗೆ 12 ರಿಂದ 15 ಕೆಜಿ ಬೀಜ ಬೇಕಾಗುತ್ತದೆ ಅದನ್ನು ಮುಂಚಿತವಾಗಿ ನೆನೆ ಹಾಕಿ ಇಡಬೇಕು ಬಳಿಕ ಮೇಲೆತ್ತಿ ಮೊಳಕೆ ಬರಿಸಲು ಇಡಬೇಕು ಮುಂಚಿತವಾಗಿ ಮಣ್ಣನ್ನು ಜರಡಿ ಹಿಡಿದು ಸಂಗ್ರಹಿಸಿ ಇಡಬೇಕು ಒಂದು ಎಕ್ರೆ ಪ್ರದೇಶಕ್ಕೆ 70 ರಿಂದ 80 ಟ್ರೇ ಗಳು ಬೇಕಾಗಿದ್ದು ಟ್ರೇ ಗಳಿಗೆ ಸರಿಯಾಗಿ ಜರಡಿ ಹಿಡಿದ ಮಣ್ಣನ್ನು ಸರಿಯಾಗಿ ತುಂಬಬೇಕು ಮೊಳಕೆ ಬರಿಸಿದ ಭತ್ತದ ಬೀಜವನ್ನು ಸರಿಯಾಗಿ ಟ್ರೇ ಬಿತ್ತಿ ಹೊದಿಕೆ ಮಾಡಬೇಕು ಮೂರು ದಿನ ನಂತರ ಹೊದಿಕೆಯನ್ನು ತೆಗೆದು ದಿನಕ್ಕೆ ಎರಡು ಅಥವಾ ಮೂರು ಬಾರಿ ಮಿತವಾಗಿ ನೀರನ್ನು ಹಿಡಿಯಬೇಕು 15ರಿಂದ 18 ದಿನದೊಳಗೆ ನಾಟಿಗೆ ಯೋಗ್ಯವಾದ ಸಸಿ ಮಡಿ ತಯಾರಾಗುತ್ತದೆ ಎಂದು ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ಮಾಹಿತಿ ನೀಡಿದರು


ಈ ಸಂದರ್ಭದಲ್ಲಿ ಪ್ರಶಾಂತ್ ಚಿತ್ತಾರ, ಅಣ್ಣಿ ಪೂಜಾರಿ, ಕೇಶವ ಪೂಜಾರಿ, ನೀಲಯ್ಯ, ಕಮಲಾಕ್ಷಿ , ಸುಶೀಲ, ಈರಮ್ಮ, ಯಶೋಧ, ಸುಮಿತ್ರಾ, ವಶಾಂತಿ, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

Related posts

ವಾಣಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಶಿಬಾಜೆಯ ದಲಿತ ಯುವಕ ಶ್ರೀಧರ್ ಸಾವಿನ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಡಿ.ಎಸ್.ಎಸ್‌ನಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ

Suddi Udaya

ಸುಲ್ಕೇರಿ ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ನಾವರ, ಉಪಾಧ್ಯಕ್ಷರಾಗಿ ಶುಭಕರ ಪೂಜಾರಿ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ ಇವರ ವತಿಯಿಂದ ವಿದ್ಯಾಸಿರಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಉಜಿರೆ ಎಸ್ . ಡಿ.ಎಂ. ಪಾಲಿಟೆಕ್ನಿಕ್ ನಲ್ಲಿ “ಸರ್ಕ್ಯೂಟ್ ಎಕ್ಸ್ಪೋ “

Suddi Udaya

ಕಳೆಂಜ ಗ್ರಾ.ಪಂ.ನಲ್ಲಿ 68 ಫಲಾನುಭವಿಗಳಿಗೆ ನೀರಿನ ಬ್ಯಾರಲ್ ವಿತರಣೆ

Suddi Udaya
error: Content is protected !!