27.8 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಸೂಳಬೆಟ್ಟು ಸ.ಕಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣೆ

ಬೆಳ್ತಂಗಡಿ: ತಾಯಿ-ತಂದೆ-ಗುರುಗಳನ್ನು ನಾವು ಜೀವನ ಪರ್ಯಂತ ನೆ‌ನಪಿನಲ್ಲಿಟ್ಟುಕೊಳ್ಳಬೇಕು. ವಿದ್ಯೆಯಿಂದ ವಿನಯವಂತರಾಗೋಣ. ರಾಷ್ಟ್ರಹಿತದ ಕಾರ್ಯಕ್ಕೆ ನೆರವಾಗೋಣ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.


ಸ.ಕಿ.ಪ್ರಾಥಮಿಕ ಶಾಲೆ ಸೂಳಬೆಟ್ಟು ಇಲ್ಲಿನ ಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೆ ರೋಟರಿ ಕ್ಲಬ್ ಸಹಯೋಗದಲ್ಲಿ ಡೋಂಗ್ರೆ ಕುಟುಂಬಸ್ಥರು ಕೊಡಮಾಡುವ 16 ನೇ ವರ್ಷದ ಉಚಿತ ಪುಸ್ತಕಗಳ ಹಾಗೂ ಶೈಕ್ಷಣಿಕ ಪರಿಕರಗಳನ್ನು ಜೂ.14 ರಂದು ವಿತರಿಸಿ ಅವರು ಮಾತನಾಡಿದರು.


ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಮೋದ ಪೂಜಾರಿ ವಹಿಸಿದ್ದರು.
ಪುಸ್ತಕಗಳ ದಾನಿಗಳಾದ ದಂತ ವೈದ್ಯ ಡಾl ಶಶಿಧರ ಡೋಂಗ್ರೆ, ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ ಡೋಂಗ್ರೆ, ಡಾl ಸುಷ್ಮಾ ಡೋಂಗ್ರೆ, ಜ್ಯೋತಿ ಪ್ರತಾಪಸಿಂಹ ನಾಯಕ್, ಅಳದಂಗಡಿ ಗ್ರಾ.ಪಂ. ಸದಸ್ಯ ಪ್ರವೀಣ, ಅಂಗನವಾಡಿ ಕಾರ್ಯಕರ್ತೆ ಶಕುಂತಲಾ ಉಪಸ್ಥಿತರಿದ್ದರು.
ಡಾl ಡೋಂಗ್ರೆಯವರು ಅಕ್ಷರ ದಾಸೋಹಕ್ಕೆ 16 ಲೀ.ಸಾಮರ್ಥ್ಯದ ಕುಕ್ಕರ್‌ನ್ನು ಕೊಡುಗೆಯಾಗಿಯೂ ನೀಡಿದರು. ನಾಯಕ್ ಅವರು ಶಾಲಾಭಿವೃದ್ಧಿಗೆ ರೂ.5,000 ದೇಣಿಗೆ ನೀಡಿದರು. ಶಾಲಾ ಹಳೆವಿದ್ಯಾರ್ಥಿ ಕೃಷ್ಣ ಆಠವಳೆ ಅವರು ಈ ಬಾರಿಯ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ಶ್ರೇಣಿಯನ್ನು ಪಡೆದಿರುವುದಕ್ಕೆ ಅವರನ್ನು ಪುರಸ್ಕರಿಸಲಾಯಿತು.


ಶಾಲಾ‌ ಮುಖ್ಯೋಪಾಧ್ಯಾಯಿನಿ ಲೀನಾ ಮೋರಾಸ್ ಸ್ವಾಗತಿಸಿ ವಂದಿಸಿದರು. ದೀಪಕ ಆಠವಳೆ ಕಾರ್ಯಕ್ರಮ ನಿರ್ವಹಿಸಿದರು.

Related posts

ಸಿ.ಎ ಪರೀಕ್ಷೆಯಲ್ಲಿ ಕುವೆಟ್ಟು ಮೇಗೇಶ್ ಯು. ಶೆಟ್ಟಿ ಉತ್ತೀರ್ಣ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ಖ್ಯಾತ ಎಸ್.ವ್ಯಾಸ ಸಂಸ್ಥಾನದ ಉಪಕುಲಪತಿ ಭೇಟಿ

Suddi Udaya

ಧರ್ಮಸ್ಥಳ ಗ್ರಾ.ಪಂ. ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಲ್ಲಿ ಸ್ವಚ್ಛತಾ ನೌಕರರ ಕುಟುಂಬದ ಆರೋಗ್ಯ ತಪಾಸಣೆ, ಸನ್ಮಾನ ಹಾಗೂ ವಸ್ತ್ರ ವಿತರಣೆ

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗ ಹಾವಳಿ

Suddi Udaya

ಮರದಿಂದ ಬಿದ್ದು ಸಾವು

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya
error: Content is protected !!