ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಗೋಪಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯ ಮೊದಲಾದ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನೀರು ನಿಲ್ಲುವಂತಹ ಸ್ಥಳ, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾದ ರೀತಿ, ವಿವಿಧ ರೋಗಗಳಾದ ಮಲೇರಿಯ, ಡೆಂಗ್ಯೂ ರೋಗ ಬರುವ ಸೊಳ್ಳೆಗಳಾದ ಅನಾಫಿಲೀಸ್, ಈಡಿಸ್ ಬಗ್ಗೆ ಹೇಳುತ್ತ ರೋಗ ಲಕ್ಷಣಗಳ ಕುರಿತು ವಿವರಿಸಿದರು, ಜ್ವರ ಬಂದಾಗ ರಕ್ತ ಪರೀಕ್ಷೆ ಮಾಡಿಯೇ ಔಷಧ ತೆಗೆದು ಕೊಳ್ಳಲು ತಿಳಿಸಿದರು. ಡೆಂಗ್ಯೂ ವಿನಂತಹ ಮಾರಣಾಂತಿಕ ಕಾಯಿಲೆಗೆ ನಿರ್ಧಿಷ್ಟವಾದ ಔಷಧವೂ ಇಲ್ಲದ ಕಾರಣ ಬರದಂತೆ ತಡೆಯುವುದು ಅತೀ ಮುಖ್ಯ ಎಂದರು.
ಅತೀ ಹೆಚ್ಚು ನೀರು ಕುಡಿಯುವುದು, ವ್ಯಾಯಮದಂತಹ ಹವ್ಯಾಸಗಳು ಕೂಡಾ ಆರೋಗ್ಯವನ್ನು ಕಾಪಾಡುತ್ತದೆ. ಎಂಬ ಮಾಹಿತಿಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸಿತು. ಬಳಿಕ ಪೈಲೇರಿಯ -ಕ್ಯೂಲೆಸ್ ಜಾತಿಯ ಸೊಳ್ಳೆಯು ಅಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟು ಬರುವ ಆನೆ ಕಾಲು ರೋಗದ ಬಗ್ಗೆ ತಿಳಿಸಿದರು. ಅದೇ ರೀತಿ ಫಾಗಿಂಗ್ ಬಗ್ಗೆಯು ಮಾಹಿತಿ ತಿಳಿಸಿದರು. ತದ ನಂತರ ಆಶಾ ಕಾರ್ಯಕರ್ತರಾದ ಯಮುನ ಇವರು ಒರಳು ಕಲ್ಲು, ಅಡಿಕೆ ಹಾಳೆ ಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾದ ಕ್ರಮ ದ ಬಗ್ಗೆ ಹೇಳುತ್ತ ಟೈಫಾಯಿಡ್ ರೋಗ ಬರುವ ರೀತಿ ಹೇಳುತ್ತಾ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಮಾಹಿತಿ ನೀಡಿದರು. ಮುಖ್ಯ ಗುರುಗಳಾದ ಪ್ರಭಾಕರ್ ರವರು ಸ್ವಾಗತಿಸಿ ಧನ್ಯವಾದಗೈದರು.