April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಪಟ್ರಮೆ: ಉಳಿಯಬೀಡುನಲ್ಲಿ ‘ಭರತ ಬಾಹುಬಲಿ’ ತಾಳಮದ್ದಲೆ

ಪಟ್ರಮೆ: ಇಲ್ಲಿಯ ಉಳಿಯಬೀಡುನಲ್ಲಿ ‘ಭರತ ಬಾಹುಬಲಿ’ ತಾಳಮದ್ದಲೆ ಕಾರ್ಯಕ್ರಮವು ಜೂ. 16 ರಂದು ನಡೆಯಿತು.

ಭಾಗವತರಾಗಿ ಶ್ರೀಮತಿ ಕಾವ್ಯಶ್ರೀ ಅಜೇರು, ಚೆಂಡೆ ಬಿ ಸೀತಾರಾಮ ತೋಳ್ವಾಡಿತ್ತಾಯ, ಮದ್ದಳೆ ಶ್ರೀ ಜನಾರ್ಧನ ತೋಳಾಡಿತ್ತಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭರತರಾಗಿ ಮುನಿರಾಜ ರೆಂಜಾಳ, ಬಾಹುಬಲಿಯಾಗಿ ರಮಣ ಅಚಾರ್, ಸುನಂದರಾಗಿ ಪ್ರಭಾತ ಬಲ್ನಾಡು, ಬುದ್ಧಿಸಾಗರರಾಗಿ ನಿತೇಶ್ ಬಲ್ಲಾಳ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಯಕ್ಷ ಸಂಘಟಕ ಭುಜಬಲಿ, ಎಸ್.ಡಿ.ಎಮ್ ಕಾಲೇಜಿನ ಪ್ರಾಂಶುಪಾಲ ಕುಮಾರ ಹೆಗ್ಡೆ, ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ, ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗುರುಪ್ರಸಾದ್ ನಿಡ್ವಾಣ್ಣಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರ ನಿತೇಶ್ ಬಲ್ಲಾಳ್, ದೇವಪಾಲ ಅಜ್ರಿ ಉಳಿಯಬೀಡು ಹಾಗೂ ಕುಟುಂಬಸ್ಥರು ಸತ್ಕರಿಸಿದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅ.ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ರಾವ್ ರವರಿಗೆ ಬೀಳ್ಕೂಡುಗೆ ಸಮಾರಂಭ

Suddi Udaya

ಕಲ್ಲೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ ಉದ್ಘಾಟನೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳಿಗೆ 12ರಲ್ಲಿ 12 ಭರ್ಜರಿ ಜಯ

Suddi Udaya

ತಾಲೂಕಿನಲ್ಲಿ ಮುಂದುವರಿದ ಬೆಟ್ಟಿಂಗ್ ಭರಾಟೆ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ವೇಣೂರು ಐಟಿಐಯಲ್ಲಿ ಬೃಹತ್ ರಕ್ತದಾನ ಶಿಬಿರ: 119 ಯುನಿಟ್ ರಕ್ತ ಸಂಗ್ರಹ

Suddi Udaya
error: Content is protected !!