30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಹನಗಳಿಗೆ ಎಲ್‌ಇಡಿ ಬಲ್ಬ್ ನಿಷೇಧ: ನಿಯಮ ಉಲ್ಲಂಘಿಸಿದರೆ ಜುಲೈ 1ರಿಂದಲೇ ದಂಡ

ಬೆಳ್ತಂಗಡಿ: ರಾಜ್ಯದಲ್ಲಿ ವಾಹನಗಳಿಗೆ ಎಲ್‌ಇಡಿ ದೀಪ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಜುಲೈ 1ರಿಂದಲೇ ಕೇಸ್ ಬೀಳಲಿದೆ. ಇತ್ತೀಚಿನ ದಿನಗಳಲ್ಲಿ ಭಾರಿ ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ಬಲ್ಟ್ ಅಳವಡಿಸಲಾಗುತ್ತಿದೆ. ಇದರಿಂದ ಎದುರು ಬರುವ ವಾಹನಗಳಿಗೆ ತೊಂದರೆ ಆಗಿ ರಸ್ತೆ ಅಪಘಾತ ಹೆಚ್ಚಳವಾಗುತ್ತಿದೆ. ಹೀಗಾಗಿ ವಾಹನ ಮಾಲೀಕರು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲಿಸಬೇಕು, ಇಲ್ಲವಾದರೆ ಸವಾರ, ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ.

Related posts

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya

ಗರ್ಡಾಡಿ: ಮಜಲು ಮನೆ ನಿವಾಸಿ ದೇವಮ್ಮ ನಿಧನ

Suddi Udaya

ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya

93 ವರ್ಷ ಪ್ರಾಯದ ವಿಶ್ರಾಂತ ಮುಖ್ಯ ಶಿಕ್ಷಕ ನಾರಾಯಣ ಪ್ರಭುರವರಿಗೆ ಗೌರವಾರ್ಪಣೆ

Suddi Udaya

ಬಾರ್ಯ : ಸುಂದರ ನೂರಿತ್ತಾಯ ಹೃದಯಾಘಾತದಿಂದ ನಿಧನ

Suddi Udaya

ಬೋರ್ ವೆಲ್ ಲಾರಿಯ ಡ್ರಿಲ್ ಯಂತ್ರ ವಿದ್ಯುತ್ ಲೈನಿಗೆ ತಾಗಿ ಕಾರ್ಮಿಕ ಮೃತ್ಯು

Suddi Udaya
error: Content is protected !!