ಕಣಿಯೂರು : “ಮಲ್ಲಿಗೆ ಕೃಷಿ ಲಾಭದಾಯಕ ಕೃಷಿ ತುಂಡು ಭೂಮಿಯಲ್ಲಿ, ಕಡಿಮೆ ಖರ್ಚಿನಲ್ಲಿ ರೈತ ಮಹಿಳೆಯರು ಮನೆ ಕೆಲಸ ಜೊತೆ ಮಾಡಬಹುದಾದ ಪುಷ್ಪ ಕೃಷಿಯಾಗಿದೆ ” ಎಂದು ಶ್ರೀ,ಕ್ಷೇ,ಧ,ಗ್ರಾ,ಯೋ, ಬಿಸಿ ಟ್ರಸ್ಟ್ ಗುರುವಾಯನಕೆರೆ ” ಯೋಜನಾಧಿಕಾರಿ ದಯಾನಂದ್ ರವರು ಹೇಳಿದರು.

ಅವರು ಶ್ರೀಮತಿ ಪ್ರಭಾವತಿಯವರ ಮನೆಯ ಹೊರಂಗನದಲ್ಲಿ ನಡೆದ ಮಲ್ಲಿಗೆ ಕೃಷಿ ಮಾಹಿತಿ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ “ಮಲ್ಲಿಗೆ ಪ್ರಗತಿಪರ ಕೃಷಿಕ ಸುರೇಶ ಮಾತನಾಡಿ ಮಲ್ಲಿಗೆ ಕೃಷಿಗೆ ದಿನದ ಪೂರ್ತಿ ಬಿಸಿಲು ಹಾಗೂ ವಾತಾವರಣದಲ್ಲಿ ತೇವಾಂಶದಿಂದ ಕೂಡಿದ್ದ ವಾತಾವರಣ ಅನುಕೂಲವಾಗಿದೆ, ನೆರಳು ಇರುವ ಜಾಗದಲ್ಲಿ ಗಿಡ ಚೆನ್ನಾಗಿ ಬೆಳೆದರು ಹೂವಿನ ಇಳುವರಿ ಕಡಿಮೆ, ಮಲ್ಲಿಗೆಯನ್ನು ನೆಡಲು ಚೆನ್ನಾಗಿ ಬಿಸಿಲು ಬೀಳುವ ಹಾಗೂ ಮಳೆಗಾಲದಲ್ಲಿ ನೀರು ನಿಲ್ಲದ ಜಾಗವನ್ನು ಆಯ್ಕೆ ಮಾಡಿಕೊಳಬೇಕು, ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ ನಾಟಿಗೆ ಸೂಕ್ತವಾದ ವಾತಾವರಣ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳು, ಜೂನ್ ತಿಂಗಳಲ್ಲಿ ಅಧಿಕ ಮಳೆ ಬೀಳುವುದರಿಂದ ಗಿಡಕ್ಕೆ ಹಾನಿ ಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ ಹೊಂಡ ದಿಂದ ಹೊಂಡಕ್ಕೆ ಆರರಿಂದ ಎಂಟು ಅಡಿ ಅಂತರವಿರಬೇಕು ಚೆನ್ನಾಗಿ ಕೊಳೆತ ಹಟ್ಟಿಗೊಬ್ಬರ ಭೂಮಿಯ ಮೇಲ್ಮನ್ನಿನ ಜೊತೆ ಮಿಶ್ರಣ ಮಾಡಿ ಕಹಿಬೇವಿನ ಹಿಂಡಿಯನ್ ಸೇರಿಸಿ ಮಿಶ್ರಣ ಮಾಡಬೇಕು ಮಧ್ಯಭಾಗದಲ್ಲಿ ಹುಂಡಿ ಮಾಡಿ ಗಿಡ ನಾಟಿ ಹಚ್ಚಬೇಕು ಮಲ್ಲಿಗೆ ಗಿಡ ಚೆನ್ನಾಗಿ ಬೆಳೆಯಲು ಉತ್ತೇಜಿಸಬೇಕು ಕೊಡೆಯಾಕಾರದಲ್ಲಿ ಬೆಳೆಯುವಂತೆ ಮಾಡಬೇಕು ಏಕೆಂದರೆ ಕೊಡೆಯ ಆಕಾರದ ಗಿಡದ ಮೇಲೆ ಬಿಸಿಲು ವಂದೇ ರೀತಿಯಲ್ಲಿ ಸಮನಾಗಿ ಬೀಳುತ್ತದೆ ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ಮಾಹಿತಿ ನೀಡಲಾಯಿತು,


ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಾನಕಿ, ಒಕ್ಕೂಟದ ಅಧ್ಯಕ್ಷ ತಿಲಕ್, ಮೇಲ್ವಿಚಾರಕರು ಶಿವಾನಂದ್, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ, ರವರು ರೈತರಿಗೆ ಗಿಡ ವಿತರಣೆ ಮಾಡಲಾಯಿತು. ಸೇವಾಪ್ರತಿನಿಧಿ ಶ್ರೀಮತಿ ಪ್ರೇಮ, ತಂಗೆವ್ವ, ಸುಶೀಲಾ, ಯಾದವ್, ಮಾಲಿನಿ,ಗೀತಾ, ಅನುರಾಧ, ಕಸ್ತೂರಿ,ಜಾನಕಿ, ಮಂಜುಳ್, ಮುಂತಾದವರು ಉಪಸ್ಥಿತರಿದ್ದರು.