ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ) ಬೆಳ್ತಂಗಡಿ ತಾಲೂಕು ಉಜಿರೆ ವಲಯದ ಉಜಿರೆ ಕಾರ್ಯಕ್ಷೇತ್ರದ ಶಾರದಾಂಬ ಸಭಾಭವನದಲ್ಲಿ ಸಮೃದ್ಧಿ ಜ್ಞಾನವಿಕಾಸ ಕೇಂದ್ರವನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ರವರು ಉದ್ಘಾಟನೆ ಮಾಡಿ ಜ್ಞಾನವಿಕಾಸ ಕೇಂದ್ರದ ಹುಟ್ಟು ಮತ್ತು ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಷಾ ರವರು ಮಹಿಳೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಜ್ಞಾನವಿಕಾಸದ ಪಾತ್ರ ಏನು ಎಂಬುದರ ಬಗ್ಗೆ ತಿಳಿಸಿದರು. ಜ್ಞಾನ ಶ್ರೀ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ಲೀಲಾವತಿ ಅವರು ಮಾತನಾಡುತ್ತಾ ನಾನು ಒಬ್ಬ ಜ್ಞಾನ ವಿಕಾಸದ ಸದಸ್ಯೆಯಾಗಿ ಬಹಳಷ್ಟು ಮಾಹಿತಿಯನ್ನು ಪಡೆದುಕೊಂಡು ಅಭಿವೃದ್ಧಿಯನ್ನು ಹೊಂದಿರುವುದರ ಬಗ್ಗೆ ತಿಳಿಸಿದರು. ಒಕ್ಕೂಟದ ಅಧ್ಯಕ್ಷೆ ಶೀಲಾವತಿ ಎಲ್ಲಾ ಕಾರ್ಯಕ್ರಮಗಳು ಉಜಿರೆಯಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಈ ದಿನ ಉದ್ಘಾಟನೆಯಾದ ಕೇಂದ್ರ ಉತ್ತಮ ರೀತಿಯಲ್ಲಿ ನಾವೆಲ್ಲರೂ ಸೇರಿ ನಡೆಸಿಕೊಂಡು ಹೋಗೊಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಸಂಯೋಜಕಿಯಾದ ಸೌಮ್ಯರವರಿಗೆ ಕೇಂದ್ರದ ದಾಖಲಾತಿಯನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ವನಿತಾ ಸ್ವಾಗತಿಸಿ. ಸೇವಾ ಪ್ರತಿನಿಧಿ ಪ್ರೇಮಲತಾ ಧನ್ಯವಾದವಿತ್ತರು. ಸಮನ್ವಯಧಿಕಾರಿ ಮಧುರಾವಸಂತ್ ಕಾರ್ಯಕ್ರಮ ನಿರೂಪಿಸಿದರು.