April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಮುಂಡಾಜೆ : ವಿವೇಕಾನಂದ ಮುಂಡಾಜೆ ಪದವಿ ಪೂರ್ವ ಕಾಲೇಜು ಇದರ ವಿದ್ಯಾರ್ಥಿ ಸಂಘದ ಉದ್ಘಾಟನೆ ಯು ಜೂ.24 ರಂದು ನಡೆಯಿತು.

ಉದ್ಘಾಟಕರಾಗಿ ಆಗಮಿಸಿದ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಮಾತನಾಡಿ, ‘ನಾಯಕರಾಗಲು ಪ್ರಮುಖವಾಗಿ ಧೈರ್ಯ ಬಹಳ ಅಗತ್ಯ. ವಿದ್ಯಾರ್ಥಿಗಳು ತಾವು ಕಲಿತ ವಿದ್ಯಾ ಸಂಸ್ಥೆಯನ್ನು ಎಂದಿಗೂ ಮರೆಯಬಾರದು’ ಎಂಬುದಾಗಿ ಕಿವಿ ಮಾತನ್ನು ನುಡಿದರು. ವಿದ್ಯಾರ್ಥಿ ನಾಯಕರುಗಳಿಗೆ ಕಾಲೇಜಿನ ಪ್ರಾಂಶುಪಾಲೆ ಜಾಲಿ ಡಿ ಸೋಜ ಪ್ರಮಾಣವಚನ ಬೋಧಿಸಿ, ಶುಭ ಹಾರೈಸಿದರು.

ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪುರುಷೋತ್ತಮ ಶೆಟ್ಟಿ ಪ್ರಸ್ತಾವಿಸಿ , ಸ್ವಾಗತಿಸಿದರು. ವೇದಿಕೆಯಲ್ಲಿ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನಾರಾಯಣ ಗೌಡ ಕೊಳಂಬೆ, ಹಾಗೂ ವಿದ್ಯಾರ್ಥಿ ನಾಯಕರುಗಳು ಉಪಸ್ಥಿತರಿದ್ದು, ಅಧ್ಯಕ್ಷ ಧನುಷ್ ಇವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಉಪನ್ಯಾಸಕಿ ಗೀತಾ ಇವರು ಪುಷ್ಪ ಗುಚ್ಛ ಸಮರ್ಪಿಸಿದರು. ಉಪನ್ಯಾಸಕಿ ವಸಂತಿ ಇವರು ನಿರೂಪಿಸಿ, ಉಪನ್ಯಾಸಕ ಪದ್ಮನಾಭ ಬಿ.ಕೆ. ಇವರು ವಂದಿಸಿದರು. ಎಲ್ಲಾ ಉಪನ್ಯಾಸಕರು ಸಹಕರಿಸಿದರು.

Related posts

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya

ಮಲಮಂತಿಗೆ: ಕೃಷಿಕ ಶೇಖರ್ ಗೌಡ ನಿಧನ

Suddi Udaya

ಡಾ. ಪ್ರಸನ್ನಕುಮಾರ ಐತಾಳರಿಗೆ “ಎ. ಶಾಮ ರಾವ್ ಸ್ಮಾರಕ ಉತ್ತಮ ಶಿಕ್ಷಕ” ಪ್ರಶಸ್ತಿ

Suddi Udaya

ಕಣಿಯೂರು : ಓಮ್ಮಿ ಕಾರು ಹಾಗೂ ರಿಡ್ಜ್ ಕಾರು ಮುಖಾಮುಖಿ ಡಿಕ್ಕಿ

Suddi Udaya

ಮದ್ದಡ್ಕ ಶ್ರೀರಾಮ ಭಜನಾ ಮಂದಿರದ ವಾರ್ಷಿಕ ಸಭೆ: ನೂತನ ಪಧಾದಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ: ರೈತರು ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಮನವಿ

Suddi Udaya
error: Content is protected !!