ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬಳಂಜ ಮತ್ತು ನಾಲ್ಕೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ನಾಗರಿಕರು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಕಷ್ಟು ವರ್ಷಗಳಿಂದ ಬಳಂಜದಲ್ಲಿ ಏರ್ಟೆಲ್ ಮೊಬೈಲ್ ಟವರ್ ಇದ್ದರೂ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆ. ವಿದ್ಯುತ್ ಹೋಗುತ್ತಿದ್ದಂತೆ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದು ಸ್ಥಳಿಯ ನಿವಾಸಿ ಕರುಣಾಕರ ಹೆಗ್ಡೆ ಬೊಕ್ಕಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಜನರಿಗೆ ನೆಟ್ವರ್ಕ್ ಸಮಸ್ಯೆಯಿಂದ ಮುಕ್ತಿ ಯಾವಾಗ,,,?ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಇಲ್ಲದೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಯುವುದಿಲ್ಲ.ಸಾಮಾನ್ಯವಾಗಿ ಎಲ್ಲಾ ಸವಲತ್ತುಗಳನ್ನು ಪಡೆಯಲು ರೇಷನ್,ಬ್ಯಾಂಕ್,ಸೈಬರ್,ಪಂಚಾಯತ್ ಹಾಗೂ ಮೊದಲಾದ ವ್ಯವಸ್ಥೆಗೆ ಮೊಬೈಲ್ ಫೋನ್ ಅಗತ್ಯ.ಹೀಗಿರುವಾಗ ನೆಟ್ವರ್ಕ್ ಇಲ್ಲವಾದರೆ ಯಾವ ಸವಲತ್ತು ಇದ್ದು ಏನು ಪ್ರಯೋಜನ.ಇದೇ ಸಮಸ್ಯೆಯಿಂದ ನಮ್ಮ ನಾಲ್ಕೂರು ಗ್ರಾಮದ ಜನರು ಬಹಳ ಇಕ್ಕಟ್ಟಿಗೆ ಸಿಲುಕಿದ್ದಾರೆ.ಒಂದು ಯಾವುದೇ ಸುದ್ದಿಯನ್ನು ಡೌನ್ ಲೋಡ್ ಮಾಡಲು ಮನೆಯಿಂದ ಹೊರಗೆ ಅಂದರೆ ಎತ್ತರದ ಪ್ರದೇಶದಲ್ಲಿ ಹೋಗಿ ಡೌನ್ಲೋಡ್ ಮಾಡಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.ಬಳಂಜ ದಲ್ಲಿ ಒಂದು ಏರ್ಟೆಲ್ ಟವರ್ ಇದ್ದು ಯಾವುದೇ ಪ್ರಯೋಜನವಾಗಿಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಟವರ್ .ಇದಕ್ಕೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಕರುಣಾಕರ ಹೆಗ್ಡೆ ಆಗ್ರಹಿಸಿದ್ದಾರೆ.