38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಳದಂಗಡಿ ಸಿಎ ಬ್ಯಾಂಕಿನಿಂದ ರೂ.25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

ತೆಂಕಕಾರಂದೂರು: ಕಳೆದ ಕೆಲ ಸಮಯದ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರ ಪ್ರಮಾಣದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತೆಂಕಕಾರಂದೂರು ಗ್ರಾಮದ ಹಿಬರೋಡಿ ಮನೆಯ ಹರೀಶ್ ಅವರಿಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ರೂ. 25 ಸಾವಿರ ಮೊತ್ತವನ್ನು ಸಿಎ ಬ್ಯಾಂಕ್ ನ ಅಧ್ಯಕ್ಷ ರಾಕೇಶ್ ಹೆಗ್ಡೆ ಹಸ್ತಾಂತರಿಸಿದರು.

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕೆಲ ಸಮಯ ಆಸ್ಪತ್ರೆಯಲ್ಲಿದ್ದರು. ಸುಮಾರು 8 ಶಸ್ತ್ರಚಿಕಿತ್ಸೆ ಕೂಡ ಆಗಿದ್ದು ಅರ್ಥಿಕವಾಗಿ‌ ಸಮಸ್ಯೆಯನ್ನು ಹರೀಶ್ ಕುಟುಂಬ ಎದುರಿಸುತ್ತಿದೆ.

ಈ ಸಂದರ್ಭದಲ್ಲಿ ಸಿಎ ಬ್ಯಾಂಕಿನ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ನಿರ್ದೇಶಕರಾದ ವಿಶ್ವನಾಥ ಹೊಳ್ಳ,ದೇವಿಪ್ರಸಾದ್ ಶೆಟ್ಟಿ, ಹೇಮಂತ್ ಕಟ್ಟೆ, ದಿನೇಶ್ ಪಿ‌.ಕೆ, ಕೊರಗಪ್ಪ, ಮಮತಾ ಪೂಜಾರಿ ಹಾಗೂ ಶರತ್ ಕಾಡಬಾಗಿಲು ಉಪಸ್ಥಿತರಿದ್ದರು.

Related posts

ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸ್ಜಿದ್ ಈದ್-ಉಲ್-ಫಿತರ್ ಆಚರಣೆ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಪ್ರಾರಂಭ

Suddi Udaya

ಬೆಳ್ತಂಗಡಿ: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಕೊಯ್ಯೂರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಬಿಎಂಎಸ್ ರಿಕ್ಷಾ ಚಾಲಕ ಸಂಘದಿಂದ ಕ್ಷೇಮನಿಧಿ ಸಹಾಯ ಹಸ್ತಾಂತರ

Suddi Udaya

ಉಜಿರೆ ಶ್ರೀ ಸಾಯಿ ಕ್ರಿಕೆಟರ್ಸ್ ಸಹಯೋಗದೊಂದಿಗೆ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Suddi Udaya
error: Content is protected !!